SHARE

ಬೆಳಗಾವಿ: ಅತ್ತ ಸಚಿವ ಸಂಪುಟ ಸಭೆಯಲ್ಲಿ ಮೂಡಲಗಿ ತಾಲೂಕು ಘೋಷಣೆ ಆಗುವ ಮುಂಚೆಯೇ ಇತ್ತ ಮೂಡಲಗಿಯಲ್ಲಿ ಸಂಭ್ರಮಕ್ಕಿಂತ, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಪ್ರಾರಂಭವಾಗಿದ್ದು, ಶಾಸಕರೊಬ್ಬರ ಬೆಂಬಲಿಗರು ಗುಂಡಾಗರ್ದಿ ಮಾಡಲು ಹೋಗಿ ಸಾರ್ವಜನಿಕರಿಂದ ಪೆಟ್ಟು ತಿಂದಿದ್ದಾರೆ.

ತಾಲೂಕು ಘೋಷಣೆಯ ಗರಿ ಪ್ರತಿಷ್ಠೆಯ ರಾಜಕಾರಣಕ್ಕೆ ಬಿದ್ದುದರಿಂದ ಮೂಡಲಗಿ ವೇದಿಕೆ ಏರಲು ಪ್ರಯತ್ನಿಸಿದ ನಾಗಪ್ಪ, ನಿಂಗಪ್ಪ, ದಾಸಪ್ಪ ಎಂಬ ಮೂವರು ಪಿಎ ಗಳನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವುದು ವರದಿಯಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯತ್ತ ನೆಟ್ಟ ನೋಟ ನೆಟ್ಟಿದ್ದ ಮೂಡಲಗಿ ಜನತೆ ಈಗ ಸಂಭ್ರಮಾಚರಣೆ ಮಾಡುವ ಬದಲು ರಾಜಕೀಯ ಏರುಪೇರಿಗೆ ಒಳಗಾಗಿ ಎರಡು ಗುಂಪುಗಳ ನಡುವೆ ಪರಸ್ಪರ ವಾಗ್ವಾದ, ಘರ್ಷಣೆ ನಡೆದಿದೆ. ಇಲ್ಲಿಯವರೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದ, ವಾಹನಗಳು ಪ್ರತಿಭಟನಾ ಸ್ಥಳದಲ್ಲಿ ಈಗ ಕಾಣುತ್ತಿಲ್ಲ ಎಂಬ ವಿಷಯ ಗಮನಸೆಳೆದಿದೆ.