SHARE

ಬೆಳಗಾವಿ: ನಗರದ ಎರಡನೇ ರೈಲ್ವೇ ಗೇಟನಲ್ಲಿ ‘ಗೇಟ್ ಗಾರ್ಡ್’ ನಿದ್ದೆಗೆ ಜಾರಿದ್ದ, ಕರ್ತವ್ಯಲೋಪದ ಅಚಾತುರ್ಯ ತಡರಾತ್ರಿ ಘಟಿಸಿದೆ. ರೈಲಿಗೆ ಹಸಿರು ಧ್ವಜ ತೋರಿಸಿ ಮುಂದೆ ಕಳಿಸಬೇಕಿದ್ದ ಗಾರ್ಡ್, ಕಂಠಪೂರ್ತಿ ಕುಡಿದು ಗಾರ್ಡ್ ರೂಮನಲ್ಲಿ ಗಡದ್ದಾಗಿ ಮಲಗಿದ್ದ ಘಟನೆ ನಡೆದಿದೆ. ತಡರಾತ್ರಿ ಆಗಮಿಸಿದ 40423 ಟ್ರೇನ್ ತನಗೆ ಗಾರ್ಡನಿಂದ ಗ್ರೀನ್ ಸಿಗ್ನಲ್ ಸಿಗದ್ದರಿಂದ ಮುಂದೆ ಚಲಿಸದೇ ಗಾರ್ಡ್‌ ನ ಹಸಿರು ಡೈರೆಕ್ಷನ್ ಗಾಗಿ ಕನಿಷ್ಠ 10 ನಿಮಿಷ ನಿಂತೆ ಬಿಟ್ಟಿತು. ಆದರೂ ಗಾರ್ಡ್ ಪತ್ತೆಯೇ ಇಲ್ಲ. ಆತಂಕಗೊಂಡ ಟ್ರೇನ್ ಡ್ರೈವರ್ ಕೆಳಗಿಳಿದು ಎಲ್ಲೆಂದರಲ್ಲಿ ಗಾರ್ಡನ ಹುಡುಕಾಟ ನಡೆಸಿದ್ದಾನೆ.

Video by: Advocate Harshvardhan Patil ಗಾರ್ಡರೂಮನಲ್ಲಿ ಗಡದ್ದಾಗಿ ಮಲಗಿದ್ದ ಗಾರ್ಡ್ ಎಷ್ಟೇ ಬಾಗಿಲು ತಟ್ಟಿದರೂ ಬಾಗಿಲು ತೆಗೆದಿಲ್ಲ. ಹರಸಾಹಸ ಮಾಡಿ ಆತನನ್ಬು ಎಬ್ಬಿಸಿ ಹೊರತಂದು ಆತನಿಂದ ಗ್ರೀನ್ ಸಿಗ್ನಲ್ ಪಡೆದ ನಂತರವೇ ಡ್ರೈವರ್ ಟ್ರೇನ್ ಏರಿ ಮುಂದೆ ಚಲಿಸಿದ್ದಾನೆ. ಟ್ರೇನ್ ಬರುವ ಗೋಸ್ಕರ ವಾಹನ ನಿರ್ಭಂದನಾ ಗೇಟಗಳನ್ನೂ ಸಹ ಈ ಭೂಪ ಹಾಕಿ ಮಲಗಿದ್ದ ಎಂಬುವುದು ಗಮನಕ್ಕೆ ಬಂದಿದೆ. ರೈಲ್ವೇ ನಿಯಮಾವಳಿಗಳ ಪ್ರಕಾರ ಗೇಟಗಳಲ್ಲಿ ಗಾರ್ಡಗಳು ಗ್ರೀನ್ ಸಿಗ್ನಲ್ ತೋರದಿದ್ದರೆ ಯಾವುದೇ ಕಾರಣಕ್ಕೂ ಟ್ರೇನ್ ಮುಂದೆ ಹೋಗದು. ಹಠಾತ್ ಆಗಿ ಟ್ರೇನ್ ನಿಂತಿದ್ದರಿಂದ ಬೆಳಗಾವಿ ರೈಲು ನಿಲ್ದಾಣದಲ್ಲೂ ಸಿಬ್ಬಂಧಿಗೆ ಆತಂಕ ಉಂಟಾಯಿತು.

ಗಾರ್ಡ್ ನ ಕರ್ತವ್ಯನಿರ್ಲಕ್ಷತೆಯಿಂದ ಆತಂಕಗೊಂಡಿದ್ದ ಡ್ರೈವರ್ ತನಗೆ ಗ್ರೀನ್ ಸಿಗ್ನಲ್ ಸಿಗದ ಬಗ್ಗೆ ಚಿಂತಿತನಾಗಿದ್ದ. ಟ್ರೇನ್ ಅಲ್ಲಿಂದ ತೆರಳಿದ ನಂತರವೂ ಮತ್ತೆ ರೂಮಲ್ಲಿ ಮಲಗಿದ್ದ ಆತನಿಗೆ ವಾಹನ ಸಂಚಾರಕ್ಕೆ ಗೇಟ್ ತೆರವು ಮಾಡುವಂತೆ ವಿನಂತಿಸಿ ಸಾರ್ವಜನಿಕರು ಹರಸಾಹಸಪಟ್ಟರು.