SHARE

ಬೆಳಗಾವಿ/ಗೋಕಾಕ: ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗೋಕಾಕ ತಾಲೂಕಿನ ಮೆಲ್ಮಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಹುದಲಿಯಿಂದ ಗೋಕಾಕ ಫಾಲ್ಸ್ ಎಡೆಗೆ ಬೈಕ್ ಮೇಲೆ ತೆರಳುತ್ತಿದ್ದ ಗಂಗಾಧರ ಮಾರುತಿ ಪಣಗುತ್ತಿ (28) ಎಂಬಾತ ಮೃತಪಟ್ಟಿದ್ದಾನೆ.

ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದರಿಂದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಯುವಕ ಗೋಕಾಕ ಫಾಲ್ಸ್ ನಿವಾಸಿ ಎನ್ನಲಾಗಿದ್ದು, ಹುದಲಿಯ ತನ್ನ ಪತ್ನಿಯ ಮನೆಯಿಂದ ಸ್ವಗ್ರಾಮಕ್ಕೆ ಮರಳುವಾಗ ಈ ಅವಘಡ ನಡೆದಿದೆ. ದಾರಿಹೋಕರು ನೀರು ಕುಡಿಸಿ, ಅಂಬ್ಯುಲೆನ್ಸ್ ಕರೆಸುವ ಪ್ರಯತ್ನ ನಡೆಸಿದ್ದ ಮಧ್ಯೆ ಅಸುನೀಗಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.