SHARE

ಬೆಳಗಾವಿ: ಸಂಸದ ಸುರೇಶ ಅಂಗಡಿ ಅವರು ಸಹ ಕೇಂದ್ರ ಸಚಿವ‌ ಅನಂತಕುಮಾರ್ ಹೆಗಡೆ ಅವರ ಹಾದಿಯನ್ನೇ ತುಳಿದಿದ್ದು ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮಹೆಸರು ಹಾಕದಂತೆ ಜಿಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಇಂದು ಅವರ ಗೃಹ ಕಚೇರಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯ ಸರಕಾರ ಸುಮಾರು ೪೧೮ ಕೋಟಿ ತೆರಿಗೆ ಹಣದಲ್ಲಿ ಕಲ್ಲಿದ್ದಲು ಹಗರಣ ಮಾಡಿದೆ ಎಂದು ಆರೋಪಿಸಿದರು. ಹಗರಣದ ಪ್ರಕರಣವನ್ನು ಸಿಬಿಐಗೆ ವಹಿಸಲು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಭಾಗವಹಿಸದಿರುವ ವಿಚಾರ‌ ಮಾಡಿರುವ ಸಚಿವ ಅನಂತಕುಮಾರ ನಡೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡ ಅವರು ಹಿಂದುಗಳ ಮಾರಣಹೋಮ ಮಾಡಿದ ವ್ಯಕ್ತಿಯ ವೈಭವಿಕರ ಮಾಡಲಾಗುತ್ತಿದೆ ಎಂದು ಟಿಪ್ಪು ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಕೇವಲ ಓಟ್ ಬ್ಯಾಂಕ್ ಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿದೆ. ಖ್ಯಾತ ಸಾಹಿತಿ ಸಂಶೋಧಕ ಚಿದಾನಂದ ಮೂರ್ತಿ ಅವರೆ ಹೇಳಿದಂತೆ ಟಿಪ್ಪು ಒಬ್ಬ ಮತಾಂದನಾಗಿದ್ದಾನೆ. ಟಿಪ್ಪು ಜಯಂತಿ ಆಚರಣೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದರು.

ಬೆಳಗಾವಿ ಜಿಲಾಡಳಿತ ತಮ್ಮ ಹೆಸರು ನಮೂದಿಸದಂತೆ ಸಂಸದ ಸುರೇಶ ಅಂಗಡಿ ಮನವಿ ಮಾಡಿದ್ದಾರೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಯಾವುದೇ ಉದ್ದೇಶವಿಲ್ಲ. ಪಕ್ಷ ಯಾವುದೇ ಆದೇಶ ಕೊಟ್ಟರು ನಿಭಾಯಿಸುವೆ‌ ಎಂದು ಪಕ್ಷದ ಬೆಳವಣಿಗೆಗಳ ಬಗ್ಗೆ ಸಂಸದ ಸುರೇಶ ಅಂಗಡಿ ವಿಚಾರ ವ್ಯಕ್ತಪಡಿಸಿದರು.