SHARE

ಬೆಳಗಾವಿ: ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಸಂಗ್ರಾಮಿಣಿ ವೀರ ರಾಣಿ ಕಿತ್ತೂರು ಚನ್ನಮ್ಮ ಉತ್ಸವ ಈ ವರ್ಷ ಹಲವು ಅಸಮಧಾನಗಳ ಮೂಲಕ ಚಾಲನೆ ಪಡೆಯಲಿದೆ. ಜಿಲ್ಲಾಡಳಿತ ಮತ್ತು ಸರಕಾರ ಉದಾಸೀನತೆ ಮೆರೆದ ಬಗ್ಗೆ ಸ್ವತಃ ಹಿರಿಯ ಕನ್ನಡಿಗರು ಮತ್ತು ಜನತೆ ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಆಸ್ಥೆಯಿಂದ ಕಿತ್ತೂರು ಉತ್ಸವ ಸಂಘಟಿಸಿಲ್ಲ. ಪ್ರತಿವರ್ಷದ ಹಬ್ಬದ ಸಂಭ್ರಮ ಈ ಬಾರಿ ಇಲ್ಲ ಎಂದು ಹೇಳಲಾಗುತ್ತಿದೆ.ಕಿತ್ತೂರು ಉತ್ಸವದ ಭವ್ಯತೆ ಕಳೆಗುಂದಿಸಿದ ಆಡಳಿತದ ನಡೆ ಬೇಸರ ತರಿಸಿದೆ ಎಂದು ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಿತ್ತೂರು ಚನ್ನಮ್ನನ ಮೂರ್ತಿಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿ ರಾಜ್ಯ ಸರಕಾರ ಚನ್ನಮ್ಮಳ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕಿತ್ತು. ಚನ್ನಮ್ಮನ ಜನ್ಮ‌ಸ್ಥಳ ಕಾಕತಿ ಅಭಿವೃದ್ಧಿ ಮಾಡದೇ ಉದಾಸೀನ ತೋರಿಸಿದೆ. ಕಿತ್ತೂರು ಉತ್ಸವ ಕಾಟಾಚಾರದ ಉತ್ಸವವಾಗಿದೆ. ಮೈಸೂರು ಬೆಂಗಳೂರು ಭಾಗದ ಉತ್ಸವಗಳಿಗೆ ಕೊಡುವ ಹಣ ಮತ್ತು ಗೌರವ ಸರಕಾರ ಈ ಭಾಗದಲ್ಲಿ ನೀಡುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಸಿದ್ದನಗೌಡ ಪಾಟೀಲ, ರಾಮಚಂದ್ರ ಢವಳಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ ಇತರರು ಉಪಸ್ಥಿತರಿದ್ದರು.