SHARE

ಬೆಳಗಾವಿ: ಜಿಲ್ಲಾಡಳಿತದಿಂದ ನಡೆಯುವ ಕನಕ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಇಂದು ನಡೆದ ಕನಕ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಯಂತಿ ಆಚರಣೆಯ ಮೆರವಣಿಗೆಯಲ್ಲಿ ಹೆಚ್ಚಿನ ಕಲಾ ತಂಡಗಳು ಭಾಗವಹಿಸಲು ಕ್ರಮ ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನವೆಂಬರ್ 6ಕ್ಕೆ ನಗರದ ಕುಮಾರ ಗಂಧರ್ವ ರಂಗಮಂದಿರಲ್ಲಿ ಅರ್ಥಪೂರ್ಣವಾಗಿ ಸರಕಾರದಿಂದ ನಡೆಯುವ ಕನಕ ಜಯಂತಿ ಕಾರ್ಯಕ್ರಮವನ್ನು ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀಮಾರ್ನಿಸಲಾಯಿತಲ್ಲದೆ ಕನಕ ಜಯಂತಿ ಸಂದರ್ಭದಲ್ಲಿ ಅವರ ಕುರಿತು ಉಪನ್ಯಾಸವನ್ನು ಹಮ್ಮಿಕೊಳ್ಳಲು ಸೂಚಿಸಲಾಯಿತು.
ಜಿ ಪ. ಸಿಇಒ ರಾಮಚಂದ್ರನ್ ಆರ್. ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಅಧಿಕಾರಿಗಳಿಗಳಾದ ಡಾ. ಉಮಾ ಸಾಲಿಗೌಡರ, ಶ್ರೀಶೈಲ ಕರಿಶಂಕರ, ಪುಂಡಲೀಕ ಅನ್ವಾಲ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.