SHARE

ಬೆಳಗಾವಿ: ನಗರದ ಆಜಾದ ನಗರದ ಒಬ್ಬಂಟಿ ಮಹಿಳೆ ಮನೆಗೆ ನುಗ್ಗಿದ ಕಳ್ಳರು ಅವಳನ್ನು ಕೊಲೆ ಮಾಡಿ ಕಳ್ಳತನ ಮಾಡಿದ್ದಾರೆ. ಶಹನಾಜ ಮೊಕಾಶಿ(೫೫) ಎಂದು ಮೃತಳನ್ನು ಗುರುತಿಸಲಾಗಿದೆ. ಆಜಾದ ನಗರದ 6 ನೇ ಕ್ರಾಸನ ಶಹನಾಜ ಮಗ ದೂರದ ದುಬೈನಲ್ಲಿ ನೆಲೆಸಿದ್ದು, ಇನ್ನೊಬ್ಬ ಮಗ ವೀರಭದ್ರ ನಗರದಲ್ಲಿ ಪ್ರತ್ಯೇಕ ವಾಸವಾಗಿದ್ದಾನೆ. ನೆರೆಹೊರೆಯ ಜನತೆ ಕುಡಿಯುವ ನೀರು ಬಂದಿರುವ ಬಗ್ಗೆ ಮಾಹಿತಿ ನೀಡಲು ಬಂದಾಗ ಮಹಿಳೆ ಕೊಲೆ ಆದ ಸ್ಥಿತಿಯಲ್ಲಿ ಬಿದ್ದಿದ್ದಳು ಎನ್ನಲಾಗಿದೆ. ಮನೆಯಲ್ಲಿನ ಹಲವು ವಸ್ತುಗಳು ಕಳುವಾಗಿದ್ದು, ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಳಮಾರುತಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು, ಹಸ್ತಮುದ್ರಣ ದಳದಿಂದ ತಪಾಸಣೆ ಮಾಡಲಾಯಿತು.