SHARE

ಬೆಳಗಾವಿ: ನೋಟು ಅಮಾನ್ಯೀಕರಣಗೊಂಡು ಇಂದಿಗೆ ವರ್ಷ ಕಳೆದ ಬೆನ್ನಿಗೆ ಕಾಂಗ್ರೆಸ್ ಕರಾಳ ದಿನಾಚರಣೆ ಹೆಸರಿನಲ್ಲಿ ತೀವೃ ಪ್ರತಿಭಟನೆ ಇಂದು ನಡೆಸಿತು. ಕಾಂಗ್ರೆಸ್ ಹಿರಿಯ ಪದಾಧಿಕಾರಿಗಳು ಕಾರ್ಯಕರ್ತರೊಂದಿಗೆ ಇಂದು ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ದೇಶದಲ್ಲಿ ಅಸಮಂಜಸವಾಗಿ ವಿನಾಶಕಾರಿ ನೋಟ್ ಬ್ಯಾನ್ ಕೇಂದ್ರ ಮಾಡಿ ಇಂದಿಗೆ ಒಂದು ವರ್ಷವಾಗಿದೆ. ನಗದು ರೂಪದ ವ್ಯವಹಾರಿಕ ದೇಶ ಭಾರತದಲ್ಲಿ ಈಗ ಅರಾಜಕತೆ ಉಂಟಾಗಿ ಆರ್ಥಿಕ ಶಿಸ್ತು ಕೆಟ್ಟಿದೆ. ಪ್ರಧಾನಿ ಮೋದಿ ಅವರ ವಿವೇಚನಾರಹಿತ ನಡೇ ಇಡೀ ಉಪಖಂಡದ ಜನಜೀವನ ಕಂಗೆಡಲು ಕಾರಣವಾಗಿದೆ. ಕಪ್ಪು ಹಣ ತಡೆಗಟ್ಟಲು, ಆರ್ಥಿಕ ಶಿಸ್ತು ತರುವ ಪ್ರಧಾನಿ ಉದ್ದೇಶ ಈಗ ಉಲ್ಟಾ ಹೊಡೆದಿದ್ದು, ಅವರ ಯೋಚನೆ ಆದರ್ಶವಾಗಿ ಕಂಡಬಂದರೂ ಭಯಾನಕವಾಗಿವೆ ಎಂದರು.

ಕಾಂಗ್ರೆಸ್ ನಗರಾಧ್ಯಕ್ಷ ರಾಜು ಸೇಠ್, ಯುವ ಘಟಕದ ಅಧ್ಯಕ್ಷ ಫೈಜಾನ ಸೇಠ್, ಮಾರ್ಟಿನ್ ಶಿವಾಪುರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.