SHARE

ಬೆಳಗಾವಿ: ವಸತಿ ಮನೆಗಳ ಬೀಗ ಮುರಿದು ಕಳ್ಳತನ ಎಸಗುತ್ತಿದ್ದ ಯುವಕನೊಬ್ಬನನ್ನು ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುಂಡಪ್ಪ ಹಣಮಂತ ಶಿರವಾಟು(೨೬) ಬಂಧಿತ. ಈತನಿಂದ ಸುಮಾರು 3 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಮೂಲತಃ ಕಲಕಾಂಭ ಗ್ರಾಮದ ಬಳಿಯ ಜೋಪಡಿ ಪಟ್ಟಿ ನಿವಾಸಿ ಎಂದು ತಿಳಿದುಬಂದಿದೆ. ನಗರದ ಕುವೆಂಪು ನಗರದ ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಇನ್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ತಿಳಿಸಿದ್ದಾರೆ.