SHARE

ಬೆಳಗಾವಿ: ಸರಕಾರದ ಆಡಳಿತ ಮುಖ್ಯಸ್ಥ, ಕುರುಬ ಸಮಾಜದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಸಂಜಯ ಪಾಟೀಲ ಅನುಚಿತ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ಕುರುಬ ಸಮಾಜದ ಕಾರ್ಯಕರ್ತರು ಇಂದು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಶಿಸ್ತಿನ ಬಿಜೆಪಿ ಪಕ್ಷದ ಗ್ರಾಮೀಣ ಶಾಸಕ ಸಂಜಯ ಪಾಟೀಲ ಶಾಂತಿ ಮತ್ತು ಅಹಿಂಸೆಯನ್ನು ಬೋಧಿಸುವ ಜೈನ್ ಧರ್ಮದಲ್ಲಿ ಹುಟ್ಟಿದವರಾಗಿದ್ದಾರೆ. ಆದರೆ ಜವಾಬ್ದಾರಿಯುತ ಶಾಸಕ ಬೇರೆಯವರ ಧಾರ್ಮಿಕ ನಂಬಿಕೆಗಳು ಹಾಗೂ ಸಂಸ್ಕ್ರತಿ ಬಗ್ಗೆ ಮತ್ತು ಆಡಳಿತ ವೈಖರಿ ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ಮುಖ್ಯಮಂತ್ರಿ ಅವರನ್ನು ಏಕವಚನದಲ್ಲಿ ನಿಂದಿಸುವುದು ತರವಲ್ಲ ಎಂದರು. ಪ್ರತಿಭಟನೆಯಲ್ಲಿ ಎಸ್.ಎಫ್.ಪೂಜಾರಿ, ಸುಧೀರ ನಾಯಕ ಹಾಜರಿದ್ದರು.