SHARE

ಬೆಳಗಾವಿ: ವಿಧಾನ ಸಭೆ ಚುನಾವಣೆ ಹೊಸ್ತಿಲಿನಲ್ಲಿರುವ ಕರ್ನಾಟಕದಲ್ಲೀಗ ರಾಜಕೀಯ ಪರ್ವ ಆರಂಭವಾಗಿದೆ ಎಲ್ಲ ಪಕ್ಷಗಳೂ ಉತ್ಸಾಹದಲ್ಲಿದ್ದು ಸಮಾವೇಶ, ಪಾದಯಾತ್ರೆಗಳ ಮೂಲಕ ಗಮನ ಸೆಳೆಯುತ್ತಿವೆ ಇದಕ್ಕೆ ಸದ್ಯದ ಸೇರ್ಪಡೆ ಜೆ.ಡಿ.ಎಸ್. ಹೌದು ಕೋಟಿ ರೂ ಬೆಲೆ ಬಾಳುವ ಐಶಾರಾಮಿ ರಥದಲ್ಲಿ ರಾಜ್ಯ ಪ್ರವಾಸದಲ್ಲಿರುವ ಕುಮಾರಸ್ವಾಮಿ ಸದ್ಯ ಬೆಳಗಾವಿ ಅಧಿವೇಶನಕ್ಕೆ ಆಗಮಿಸಿದ್ದು ನಾಳೆ ಅಂದರೆ ದಿ 14 ರಂದು ನಗರದ ಸಿ.ಪಿ.ಎಡ ಮೈದಾನದಲ್ಲಿ ಕುಮಾರಪರ್ವ 2018 ಎಂಬ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮ ದಿಂದ ಉತ್ತರ ಕರ್ನಾಟಕದಲ್ಲಿ ಅಧಿಕೃತವಾಗಿ ಜೆ.ಡಿ.ಎಸ್ ತನ್ನ  ಚುನಾವಣಾ ಪ್ರಚಾರ ಆರಂಭಿಸಲಿದೆ. ಅದೇ ರೀತಿ ಈ ಸಮಾವೇಶಕ್ಕೆ ರಾಯಚೂರಿನಿಂದ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಶಾಸಕ ನಡಹಳ್ಳಿ ಯವರನ್ನು ಬೆಳೆಗ್ಗೆ ಸಮೀಪದ ಕಾಕತಿ ಗ್ರಾಮದಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದು, ಕಾರ್ಯಕ್ರಮದಲ್ಲಿ ತನ್ನ ಅಪಾರ ಬೆಂಬಲಿಗರ ಜೊತೆ ರೈತ ಮುಖಂಡ ಬಾಬಾಗೌಡ ಪಾಟೀಲ ಜೆ.ಡಿ.ಎಸ ಸೇರುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50 ಸಾವಿರ ಜನ ಆಗಮಿಸುವ ನೀರಿಕ್ಷೆ ಇದ್ದು 35 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಮದ್ಯಾಹ್ನ 12.00ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು ಬರುವ ಕಾರ್ಯಕರ್ತರಿಗೆ ಉತ್ತರ ಕರ್ನಾಟಕ ಶೈಲಿಯ ಭೋಜನದ ವ್ಯವಸ್ಥೆ ಮಾಡಲಾಗಿದೆ.