SHARE

ಬೆಳಗಾವಿ: ಫ್ಲೆಕ್ಸ್ ಗಳಲ್ಲಿನ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.ನಗರದ ಆರ್ ಟಿ ಓ ವೃತ್ತದ ಬೃಹತ್ ಸ್ವಾಗತ ಬ್ಯಾನರನಲ್ಲಿ ಬರೀ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಹರಿದು ಹಾಕಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಮತ್ತು ಸಿದ್ದರಾಮಯ್ಯ ಭಾವಚಿತ್ರಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಭಾವಚಿತ್ರ ಮಾತ್ರ ಹರಿದು ಹಾಕಿದ್ದು ಗಮನಕ್ಕೆ ಬಂದಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಸ್ವಾಗತ ಕೋರಿ ಹಾಕಿಸಿರುವ ಬ್ಯಾನರ್ ನಲ್ಲಿ ಈ ಅವಘಡವಾಗಿದ್ದು, ಕಿಡಿಗೇಡಿಗಳ ಕೃತ್ಯ ಎನ್ನಲಾಗುತ್ತಿದೆ.