SHARE

ಬೆಳಗಾವಿ: ಜೆಡಿ ಎಸ್ ಪಕ್ಷದಿಂದ ಉತ್ತರ ಕರ್ನಾಟಕದಲ್ಲಿ ಅಚಲ ಹೋರಾಟ ಎಂದೇ ಬಿಂಬಿಸಲಾಗುತ್ತಿರುವ ‘ಕುಮಾರ ಪರ್ವ’ ಮಹಾ ಸಮಾವೇಶಕ್ಕೆ ಬೆಳಿಗ್ಗೆ ಸಿಪಿಎಡ್ ಮೈದಾನದಲ್ಲಿ ತುರುಸಿನ ತಯ್ಯಾರಿ ನಡೆದಿತ್ತು.ಸುಮಾರು 20 ಸಾವಿರ ಜನಸಂಖ್ಯೆಯ ಕುರ್ಚಿಗಳನ್ನು ಸಮಾವೇಶದಲ್ಲಿ ಹಾಕಲಾಗಿದ್ದು, ಸುಮಾರು 50 ಸಾವಿರ ಜನ ಸೇರುವ ಬಗ್ಗೆ ಅಂದಾಜು ಮಾಡಲಾಗಿದೆ. ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್. ವಿಶ್ವನಾಥ, ಮಧು ಬಂಗಾರಪ್ಪ, ಬಸವರಾಜ ಹೊರಟ್ಟಿ, ಟಿ‌ ಎ. ಶರವಣ ಸೇರಿದಂತೆ ವರಿಷ್ಠ ನಾಯಕರು ಭಾಗವಹಿಸಲಿದ್ದಾರೆ. ಜೆಡಿಎಸ್ ಮಹಾಸಮಾವೇಶಕ್ಕೆ ಮಧು ಬಂಗಾರಪ್ಪ ಸಾರಥ್ಯ ವಹಿಸಿರುವುದು ಗಮನಾರ್ಹ.ಸುಮಾರು 40ರಿಂದ 50 ಸಾವಿರ ಜನಕ್ಕೆ 40 ಕ್ವಿಂಟಲ್ ಅಕ್ಕಿಯ ಅನ್ನ , ಸಾರು, ಶಿರಾ, ಪಲ್ಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ನೇತೃತ್ವದಲ್ಲಿ ಬೆಳಿಗ್ಗೆ ಅಪಾರ ತಯ್ಯಾರಿ ನಡೆದಿತ್ತು.