SHARE

ಬೆಳಗಾವಿ/ಖಾನಾಪುರ: ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರಿಗೆ ಎಟಿಎಂ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. ಕಾಂಗ್ರೆಸ್ ಮುಖಂಡರಾದ ಡಾ. ಅಂಜಲಿತಾಯಿ ನಿಂಬಾಳಕರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆರ್ಥಿಕ ಸಶಕ್ತ ಸ್ತ್ರೀಯರನ್ನು’ ನಿರ್ಮಿಸುವ ದಿಶೆಯಲ್ಲಿ ಅವರಿಗೆ ATM ಕಾರ್ಡಗಳ ಬಳಕೆಗೆ ನಿಯೋಜಿಸಲಾಯಿತು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗೆ ಬ್ಯಾಂಕ್ ಅಕೌಂಟ್ All Time Money ಕಾರ್ಡಗಳ ವಿತರಣೆ ನಡೆಯಿತು. ಸುಮಾರು ಎರಡು ನೂರಕ್ಕೂ ಅಧಿಕ ಮಹಿಳೆಯರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಈ ಪ್ರಯತ್ನದ ಸಫಲತೆ ಪಡೆದರು.ಕ್ರೀಡೆ, ಸಾಹಿತ್ಯ, ದೇಶಿ ಸಂಸ್ಕ್ರತಿಯ ಜೀವಂತಿಕೆ ಮತ್ತು ಸುಪ್ತ ಪ್ರತಿಭೆಗಳ ಅನಾವರಣ ಮಾಡಿಸುವ ಮೂಲಕ ಸಾಮಾಜಿಕ ಆರ್ಥಿಕ ಸಶಕ್ತಿಕರಣ ಮಾಡುವ ಧ್ಯೇಯ ಪ್ರಕಟಿಸಲಾಯಿತು.