SHARE

ಬೆಳಗಾವಿ (ಸುವರ್ಣಸೌಧ): ಉತ್ತರ ಕರ್ನಾಟಕಕ್ಕೆ ನ್ಯಾಯೋಚಿತ ಅಭಿವೃದ್ಧಿ ಹಣ ಪಡೆಯುವಲ್ಲಿ ಇಲ್ಲಿಯ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಪರಿಷತ್ ಸದಸ್ಯ ಬಸವರಾಜ ಪಾಟೀಲ(ಯತ್ನಾಳ) ಅಸಮಧಾನ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕವನ್ನು ಸದ್ಯ ನೀರಾವರಿ ಮಾಡಬೇಕಿದೆ. ಮಹಾದಾಯಿ, ಕಳಸಾ- ಬಂಡೂರಿ ನದಿಗಳ ಮೂಲಕ ನೀರಾವರಿ ಯೋಜನೆ ಮಾಡಿದಾಗ ಏನಾದರೂ ಹೊಂಗನಸು ಬರಲು ಸಾಧ್ಯ. ಉತ್ತರ ಕರ್ನಾಟಕ ಭಾಗದ ಹಲವು ಮುಖ್ಯಮಂತ್ರಿಗಳಾಗಿದ್ದವರು, ಸಚಿವರು ಸಹ ಇಲ್ಲಿಯ ಅಭಿವೃದ್ಧಿಗೆ ಪ್ರಯತ್ನ ಮಾಡಿಲ್ಲ. ಎಚ್. ಡಿ. ದೇವೆಗೌಡ ಮತ್ತು ಜೆ. ಎಚ್. ಪಟೇಲ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಇಳಿದ ಮೊದಲಿಗರು. ಅಂದೊಬ್ಬ ಸಿಎಂ ನೀರಾವರಿ ಯೋಜನೆಗಳು ಆರಂಭವಾದರೆ ಜನ ಅಭಿವೃದ್ಧಿ ಯಾಗುತ್ತಾರೆ ಎಂಬ ಮನೋಭಾವನೆ ಸಹ ಹೊಂದಿದ್ದರು ಎನ್ನಿಸುತ್ತದೆ ಎಂದರು. ಹೈಕಮಾಂಡ್ ಸಂಸ್ಕ್ರತಿಯ ಕಾರಣ ಉತ್ತಮ ರಾಜಕಾರಣಿಗಳು, ವಿಚಾರವಂತರು ಬಾರದೇ ಪ್ರಮಾಣಿಕತನ ಕಡಿಮೆಯಾಗಿದೆ. ಬಳ್ಳಾರಿ ಗಣಿ ಉದ್ಯಮ ಇಡೀ ಉತ್ತರ ಕರ್ನಾಟಕ ರಾಜಕಾರಣ ಹಾಳಾಗಿ ಹೋಗಿದೆ. Real Estate, Excise ಉದ್ಯಮಿಗಳು ರಾಜಕಾರಣಕ್ಕೆ ಬಂದಿದ್ದಾರೆ. ಫಲಾನುಭವಿಗಳಿಗೆ ಸರಕಾರಿ ಹಣ ತಲುಪುತ್ತಿದೆಯೇ ಎಂಬುವುದು ಜನಪ್ರತಿನಿಧಿಗಳ ಜವಾಬ್ದಾರಿ. ಕಮಿಷನ್ ಮತ್ತು ಪರ್ಸೆಂಟೇಜ್ ಹಾವಳಿ ಕಡಿಮೆಯಾಗಿ ಇಲ್ಲಿನ ಜನಪ್ರತಿನಿಧಿಗಳು ಒಟ್ಟಾಗಬೇಕು ಎಂದರು.