SHARE

ಬೆಳಗಾವಿ: ನಗರ ನಾಗರಿಕರ ಮನೆಬಾಗಿಲಿಗೆ ಈಗ ಕಾರ್ ವಾಶಿಂಗ್ ಸೇವೆ ಸಹ ಆನಲೈನ್ ಆದೇಶ ಕೊಡುವ ಮೂಲಕ ಒದಗಿ ಬಂದಿದೆ. ‘ಅಟೋ ವಾಶ್ ಎಕ್ಸಪ್ರೆಸ್’ ಆ್ಯಪ್ ಅಭಿವೃದ್ಧಿ ಪಡಿಸಿರುವ ಇಬ್ಬರು ಸಹೋದರ ಸಂಬಂಧಿಗಳು ಇಂದು ತಮ್ಮ ಹೊಸ ಸೇವಾ ಯೋಜನೆಯ ಮಾಹಿತಿ ನೀಡಿದರು.ತಾವು ಖರೀದಿಸಿದ ಹೊಸ ಕಾರುಗಳು ಧೂಳು ಹಿಡಿದು ಅಸಹ್ಯವಾಗಿದ್ದರೆ ನಮಗೆಲ್ಲ ಅಸಹನೆ ಉಂಟಾಗುತ್ತದೆ. ಜತೆಗೆ ಸರ್ವೀಸ್ ಸೆಂಟರಗಳಿಗೆ ಬಾರಿ ಬಾರಿ ಹೋಗುವುದು ಸಹ ಆಗದು. ಇಂತಹ ಜನಬೇಡಿಕೆಯ ಸೇವೆ ನೀಡಲು ಹೊಸ ಆ್ಯಪ್ ಸೃಷ್ಟಿಸಿ ಸೇವೆಗೆ ಸಿದ್ದರಾಗಿದ್ದಾರೆ. ಮನೀಷ್ ದೇಸಾಯಿ ಹಾಗೂ ಸಂಜಯ ಮೆಟಗುಡ್. ಇಂದು ಮಾಹಿತಿ ನೀಡಿ ಫ್ರೇಶರ್ ಶಾಂಪೂ ವಾಶ್, ಇಂಟಿರೀಯರ್ ಕ್ಲೀನಿಂಗ್, ಡ್ಯಾಶಬೋರ್ಡ್ ಟ್ರೀಟಮೆಂಟ್, ಎಸಿ ಡಕ್ಟ್ ಡಿಸಬ್ಫೆಕ್ಷನ್, ಎಂಜಿನ್ ಬೇ, ಟೈಯರ್ ಪ್ರೋಟೆಕ್ಷನ್, ವೆಟ್ ವ್ಯಾಕ್ಯೂಮ್ ಕ್ಲೀನಿಙಗ್ ಸೇರಿ ಇತರ ಸೇವೆಗಳು ₹ 180 ರಿಂದ ₹1350 ದರದಲ್ಲಿ ಇದ್ದು, ಬೇರೆ ಮೆಕ್ಯಾನಿಕ್, ವಾಶಿಂಗ್ ಸೆಂಟರಗಳಿಗೆ ಹೋಲಿಸಿದರೆ ಕಡಿಮೆ ಎಂದು ತಿಳಿಸಿದರು. ಗೂಗಲ್ ಪ್ಲೇ ಸ್ಟೋರನಲ್ಲಿ auto wash express app ಡೌನಲೋಡ್ ಮಾಡಿಕೊಳ್ಳಬಹುದು ಇಲ್ಲವೇ ಮೊ. 8711888877ಗೆ ಕರೆ ಮಾಡಬಹುದು.