SHARE

ಬೆಳಗಾವಿ: ವಿಶೇಷ ಚೇತನರ ಬಗ್ಗೆ ಸರಕಾರ ಅಮಿತ ಕಾಳಜಿ ಹೊಂದಿದ್ದು, ಅವರ ಏಳ್ಗೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು. ವಿಶ್ವ ವಿಕಲಚೇತನರ ದಿನದ ಅಂಗವಾಗಿ ಜಿಲ್ಲಾಡಳಿತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ವಿಶೇಷ ಚೇತನರ ಯಾವುದೇ ಸಮಸ್ಯೆ ಕೇಳಲು ಮತ್ತು ಪರಿಹರಿಸಲು ನಾನು ಬದ್ಧನಾಗಿದ್ದೇನೆ. ನಿಮಗಿರುವ ಸರಕಾರಿ ಸಹಾಯ ಸವಲತ್ತುಗಳ ಬಗೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಸರಕಾರಿ ವಿಶೇಷಚೇತನ ವಸತಿ ಶಾಲೆಗಳ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ, ನಂತರ ಮೂರುಚಕ್ರದ ಬೈಕಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವ ಸಬಲೀಕರಣ ಹಾಗೂ ವಿಕಲಚೇತನರ ನೌಕರರ ಸಂಘ ಕಾರ್ಯಕ್ರಮ ಸಹಯೋಗ ವಹಿಸಿದ್ದವು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಸಿಇಓ ಡಾ. ರಾಮಚಂದ್ರನ್, ಶಾಸಕ ಫಿರೋಜ್ ಸೇಠ್, ಕಮಿಷ್ನರ್ ಶಶಿಧರ ಕುರೇರ, ಎಸಿ ಡಾ. ಕವಿತಾ ಯೋಗಪ್ಪನವರ ಉಪಸ್ಥಿತರಿದ್ದರು.