SHARE

ಬೆಳಗಾವಿ: ನಾಳೆ ರವಿವಾರ ತುಮಕೂರಿನಲ್ಲಿ ನಡೆಯುವ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಸಮಾವೇಶಕ್ಕೆ ತುಮಕೂರು ನಗರ ಸಜ್ಜು ಗೊಂಡಿದೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರ 1 ಲಕ್ಷ ಕಾರ್ಯಕರ್ತರು ಈ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈ ನಡುವೆ ಬೆಳಗಾವಿ ಜಿಲ್ಲೆಯಿಂದಲೂ ನೂರಾರು ಅಲ್ಪಸಂಖ್ಯಾತ ಕಾರ್ಯಕರ್ತರು ಭಾಗವಹಿಸಲಿದ್ದು ಸಕಲ ವ್ಯವಸ್ಥೆಯನ್ನು ಮಾಡಲಾಗಿದ್ದು ಸಮಾವೇಶ ಅಭೂತಪೂರ್ವ ಯಶಸ್ಸು ಕಾಣಲಿದೆ ಎಂದು ಜೆಡಿಎಸ್ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫೈಜುಲ್ಲಾ ಮಾಡಿವಾಲೆ ತಿಳಿಸಿದರು. thebelgaumnews.com ಜೊತೆ ಮಾತನಾಡಿದ ಅವರು ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ಪರವಾಗಿದ್ದು ಸರಕಾರ ಬಂದರೆ ಸಾಚಾರ ಕಮೀಟಿ ಶಿಫಾರಸುಗಳನ್ನು ಜಾರಿಗೆ ತರಲಾಗುವದು ಎಂದು ಕುಮಾರಸ್ವಾಮಿಯವರು ಮೊದಲೇ ಘೋಷಿಸಿದ್ದಾರೆ ಎಂದು ಇದೇ ಸಂಧರ್ಭದಲ್ಲಿ ಅವರು ಹೇಳಿಸರು. ರವಿವಾರ ತುಮಕೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆದ ನಂತರ ಮುಂದೆ ರಾಯಚೂರು ಹಾಗೂ ಮಂಗಳೂರಿನಲ್ಲಿ ಜೆಡಿಎಸ್ ಸಮಾವೇಶಗಳನ್ನು ನಡೆಸಲಿದೆ ಎಂದರು.