SHARE

ಬೆಳಗಾವಿ: ಪ್ರಾಥಮಿಕ ಶಿಕ್ಷಣದಲ್ಲಿ ಪಾಸ್ ಫೇಲ್ ಪದ್ಧತಿ ಜಾರಿ ಮಾಡಬೇಕೆಂದು AIDSO ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು. ಔಪಚಾರಿಕ ಶಿಕ್ಷಣದ ಬುನಾದಿ ಪ್ರಾಥಮಿಕ ಶಿಕ್ಷಣ. ಶಿಕ್ಷಣ ಗುಣಮಟ್ಟ ಸುಧಾರಣೆ ಹೆಸರಿನಲ್ಲಿ ತರುತ್ತಿರುವ ನೀತಿಗಳು ಶಿಕ್ಷಣವನ್ನು ಅಧೋಗತಿಗೆ ಇಳಿಸುತ್ತಿದ್ದು ಅದರಲ್ಲಿ ಪಾಸ್ -ಫೇಲ್ ರದ್ಧತಿ ಒಂದು ಮಾರಕ ನಿರ್ಣಯ ಎಂದರು. ಪಾಸ್- ಫೇಲ್ ಪದ್ಧತು ರದ್ಧತಿ ಇದು ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೇ ತೆಗೆದುಕೊಂಡ ಏಕಪಕ್ಷೀಯ ನಿರ್ಣಯ. ಒಂದನೇ ತರಗತಿಯಿಂದಲೇ ಪಾಸ್ ಫೇಲ್ ಪದ್ಧತಿ ಪುನ ಆರಂಭಿಸಬೇಕು, ಶಿಕ್ಷಕರಿಗೆ ಶಿಕ್ಷಣವನ್ನಷ್ಟೇ ಕೆಲಸ ನೀಡಬೇಕು, ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಸಂಘಟನೆ ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಮಹಾಂತೇಷ.ಬಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.