SHARE

ಬೆಳಗಾವಿ: ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಬಾರದ ಹಿನ್ನೆಲೆಯಲ್ಲಿ ನಡೆದ ಅಹೋರಾತ್ರಿ ರೈತರ ಧರಣಿ ಇಂದು ಅರೆಬೆತ್ತಲೆ ಧರಣಿಯಾಗಿ ಮುಂದುವರೆಯಿತು. ನೂರಾರು ರೈತರು ಇಡೀರಾತ್ರಿ ಭಜನೆ ಮಾಡಿ, ಅಡುಗರ ತಯಾರಿಸಿ ಸರಕಾರ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆ ಭೇಟಿ ಹಿನ್ನೆಲೆಯಲ್ಲಿ ಇಡೀ ಜಿಲ್ಲಾಡಳಿತ ಅವರ ಹಿಂದೆ ಇದ್ದಿದ್ದರಿಂದ ರೈತರನ್ನು ಕೇಳಲು ಡಿಸಿ ಕಚೇರಿ ಬಳಿ ಯಾರೂ ಕಾಣಿಸಲಿಲ್ಲ. ಡಿಸಿಪಿ ಅಮರನಾಥರೆಡ್ಡಿ ಸಮಾಧಾನ ಪಡಿಸಲು ಯತ್ನಿಸಿ ವಿಫಲರಾದರು. ಇದರಿಂದ ಪ್ರತಿಭಟನೆ ಮತ್ತೆ ತೀವೃತೆ ಪಡೆಯಿತು.ಸ್ವತಃ ಸಚಿವ ರಮೇಶ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆಯ ಬಾಕಿ ಬಿಲ್ ಬಾರದೇ ಇರುವುದು ಸರಕಾರದ ಆಡಳಿತ ವೈಖರಿ, ಕೆಟ್ಟ ರಾಜಕೀಯದ ವೈಖರಿ ಎಂದು ರೈತ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. ಸಂಜೆ ಸಿಎಂ ಜತೆಗೆ ರೈತರ ಪ್ರತಿಭಟನೆ ಏರ್ಪಡಿಸುವ ಇಂಗಿತ ಜಿಲ್ಲಾಡಳಿತ ವ್ಯಕ್ತಪಡಿಸಿದ್ದು, ಕಾಯ್ದು ನೋಡಬೇಕಿದೆ.