SHARE

ಬೆಳಗಾವಿ/ನವದೆಹಲಿ: ಸ್ವತಃ ಸಂಸತ್ತಿನಲ್ಲಿ ಹಾಗೂ ಹೊರಗೆ ಕೇಂದ್ರ ಸಚಿವ ಹಾಗೂ ಕಾರವಾರ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತ ಅವರು ಕ್ಷಮೆ ಯಾಚಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ಸ್ ಪಕ್ಷ ಘೇರಾವ್ ಹಾಕಿ ಕ್ಷಮೆ ಯಾಚನೆ ಅಲ್ಲದೆ ರಾಜಿನಾಮೆ ನೀಡಬೇಕು ಎಂದು ಒತ್ತು ಹಿಡಿದಿದ್ದರು. ಇದಕ್ಕೆ ಸ್ಪಂದಿಸಿ ಸಂವಿಧಾನವನ್ನು ನಾನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಸಂವಿಧಾನ ವಿರೋಧಿತನದ ಭಾವನೆ ನನ್ನಲ್ಲಿಲ್ಲ ಎಂದು ಸ್ಪಷ್ಠಪಡಿಸಿ ಅನಂತಕುಮಾರ ಹೆಗಡೆ ಲೋಕಸಭೆಯಲ್ಲಿ ಕ್ಷಮಾಪನೆ ಕೇಳಿದ್ದಾರೆ. ಸಂವಿಧಾನ ರಚನೆ ಮತ್ತು ತಿದ್ದುಪಡಿಗಳ ವಿಷಯವಾಗಿ ಇತ್ತೀಚೆಗೆ ಅವರು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.