SHARE

ಬೆಳಗಾವಿ: ಕೇಂದ್ರ ಸರಕಾರದ ವೈದ್ಯಕೀಯ ಬಿಲ್ ವಿರುದ್ಧ ನಡೆದಿರುವ ಪ್ರತಿಭಟನೆಗೆ ಬೆಳಗಾವಿಯಲ್ಲಿ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ನೀತಿ ಆಯೋಗದ ಶಿಫಾರಸ್ಸಿನ ಮೇರೆಗೆ IMC ಕಾಯ್ದೆಯನ್ನು NMC (The National Medical Commission Bill, 2017) ಕಾಯ್ದೆಯಾಗಿ ಮಾರ್ಪಡಿಸುವ ಕೇಂದ್ರದ ವಿಚಾರವಾಗಿ ವೈದ್ಯರ ದೇಶವ್ಯಾಪಿ ಪ್ರತಿಭಟನೆ ಇಂದು ನಡೆದಿದೆ. ಕೇಂದ್ರ ತರಲು ಹೊರಟಿರುವ ಮಾರ್ಪಾಡಿತ ಬಿಲ್ ವೈದ್ಯಕೀಯ ವ್ಯವಸ್ಥೆಯಲ್ಲಿ ಹೇರಾಪೇರಿ ಉಂಟು ಮಾಡಲಿದೆ ಎಂದು ಬೆಳಗಾವಿ ಇಂಡಿಯನ್ ಮೆಡಿಕಲ್ ಅಸೋಶಿಯೇಶನ್ ತಿಳಿಸಿದೆ. ಬೆಳಗಾವಿಯಲ್ಲಿ ಬೆರಳೆಣಿಕೆಯ ಜನ ವೈದ್ಯರು ಜಿಲ್ಲಾಧಿಕಾರಿ ಮೂಲಕ ಪ್ರಧಾನಿಗೆ ಪತ್ರ ರವಾಣಿಸಿದರು.