SHARE

ಬೆಳಗಾವಿ: ಸಾಮಾಜಿಕ ಹೋರಾಟಗಾರ, ದೇಶದ ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರ ಅಣ್ಣಾ ಹಜಾರೆ ಇಂದು ನಗರದಲ್ಲಿ ಸಾರ್ವಜನಿಕ ಸಭೆಯುದ್ದೇಶಿಸಿ ಮಾತನಾಡಿದರು. ನಗರದ ಟಿಳಕವಾಡಿ, ವ್ಯಾಕ್ಸಿನ್ ಡಿಪೋ ಬಳಿಯ ಲೇಲೆ ಮೈದಾನದಲ್ಲಿ ಸಂಜೆ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಪ್ರಾರಂಭವಾದ ಸಭೆಯಲ್ಲಿ ಅಣ್ಣಾ ತಮ್ಮ ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಂದುವರೆದ ಭಾಗ ಹಾಗೂ ಪ್ರಸ್ತುತ ದೇಶಿಯ ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ದೇಶವಾಸಿಗಳ ಬೆಂಬಲ ಯಾಚಿಸಿದರು. ಸಂಜೆ 4:30ಕ್ಕೆ ಅಣ್ಣಾ ವೇದಿಕೆ ಏರಿ ಮೊದಲು ವಂದೇ ಮಾತರಂ ಎಂದು ಸಾರ್ವಜನಿಕರನ್ನುದ್ದೇಶಿಸಿ ಕೂಗಿ ಹುರಿದುಂಬಿಸಿದರು. ಕಾರ್ಯಕ್ರಮಕ್ಕಿಂತ ಮುಂಚೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ತೆರೆದ ವೇದಿಕೆಯಲ್ಲಿ ನಡೆದವು. ಲೇಲೆ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿ ಅಣ್ಣಾ ಭಾಷಣ ಆಲಿಸಿದರು. ಕೂಡಲಸಂಗಮದ ಶ್ರೀ ಜಯಮೃತ್ಯುಂಜಯ ಮಹಾಸ್ವಾಮೀಜಿ, ಶಿವಾಜಿ ಕಾಗಣಿಕರ ಉಪಸ್ಥಿತರಿದ್ದರು.