SHARE

ಬೆಳಗಾವಿ: ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬರಬೇಕಿದ್ದ ಕಬ್ಬಿನ ಬಾಕಿ ಬಿಲ್ ಗೆ ಆಗ್ರಹಿಸಿ ನಡೆದಿದ್ದ ರೈತರ ಅಹೋರಾತ್ರಿ ಧರಣಿಗೆ ಮತ್ತೆ ಹಣ ಕೊಡುವ ಭರವಸೆ ಇಂದು ಸಂಜೆ ಸಿಕ್ಕಿತು. ಅಹೋರಾತ್ರಿ ಧರಣಿ ನಡೆಸಿದ್ದ ರೈತರು ಸಂಜೆ ವ್ಯಗ್ರಗೊಂಡು ರಸ್ತೆ ತಡೆ ಇಲ್ಲವೇ ಡಿಸಿ ಚೇಂಬರ್ ಗೆ ನುಗ್ಗಲು ಸನ್ನದ್ಧರಾಗುತ್ತಿದ್ದಂತೆ ಎಡಿಸಿ ಡಾ. ಸುರೇಶ ಇಟ್ನಾಳ ಆಗಮಿಸಿ ಸದರಿ ಕಾರ್ಖಾನೆ ಪ್ರತಿನಿಧಿಗಳಿಂದ ಹಣ ಕೊಡುವ ವಾಗ್ದಾಣ ಮಾಡಿಸಿದರು.ಬರಲಿರುವ ಬುಧವಾರದಿಂದ ಒಂದು ವಾರದಲ್ಲಿ ಅಷ್ಟೂ ಹಣ ಚುಕ್ತಾ ಮಾಡುವುದಾಗಿ ಮತ್ತು ಆ ಬಗ್ಗೆ ಲಿಖಿತ ಕೊಡುವುದಾಗಿ ಕಾರ್ಖಾನೆ ಪ್ರತಿನಿಧಿಗಳು ಎಡಿಸಿ ಸಮ್ಮುಖ ರೈತರಿಗೆ ತಿಳಿಸಿದರು. ಈ ಬಾರಿ ಒಬ್ಬ ರೈತನ ನಯಾ ಪೈಸೆ ಬಿಡದಂತೆ ಹಣ ಕಟ್ಟಲು ಎಡಿಸಿ ಡಾ. ಸುರೇಶ ಇಟ್ನಾಳ ಕಾರ್ಖಾನೆ ಪ್ರತಿನಿಧಿಗಳಿಗೆ ಎಚ್ಚರಿಸಿದರು. ಲಿಖಿತ ಹೇಳಿಕೆ ಕೊಟ್ಟ ಮೇಲೆ ಜಾಗದಿಂದ ಕದಲುವುದಾಗಿ ರೈತರು ತಿಳಿಸಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಂಕರ ಮಾರಿಹಾಳ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.