SHARE

ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಬೆಳಗಾವಿ ವತಿಯಿಂದ ಇಂದು ಸಿರಿಗನ್ನಡ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತರಾದ ಸರಜೂ ಕಾಟಕರ ಮತ್ತು ವಿಕ ಸ್ಥಾನಿಕ ಸಂಪಾದಕ ಎಂ. ಕೆ. ಹೆಗಡೆ ಅವರಿಗೆ ಇಂದು ಪ್ರಶಸ್ತಿ ಸಂದಿದೆ.ಎಂ. ಕೆ. ಹೆಗಡೆ ಅವರಿಗೆ ‘ಮಹಾದಾಯಿ’ ಕೃತಿಗೆ ಪ್ರಶಸ್ತಿ ಅರಸಿ ಬಂದರೆ,‘ಮರಾಠಿ ಕಲಬುರ್ಗಿ’ ಕೃತಿಗೆ ಸರಜೂ ಕಾಟಕರ ಅವರು ಪ್ರಶಸ್ತಿ ಪಡೆದಿದ್ದಾರೆ. ಸ್ಮರಣಿಕೆ, ಪ್ರಶಸ್ತಿಯೊಂದಿಗೆ ಸತ್ಕರಿಸಲಾಯಿತು.