SHARE

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಹಿರಿಯ ಪತ್ರಕರ್ತ ಡಾ ವಿರೇಶ ಹಿರೇಮಠ ಸಾವಿಗೀಡಾಗಿದ್ದಾರೆ. ಪತ್ನಿ ಗೌರಿ ಮತ್ತು ಕಾರು ಚಾಲಕ ಸುನೀಲ್ ಗೆ ಗಂಭೀರ ಗಾಯಗಳಾಗಿವೆ. ಗೋವಾ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ಬಾಗಲಕೋಟೆಗೆ ಹಿಂದಿರುಗುವಾಗ ದುರ್ಘಟನೆ ನಡೆದಿದೆ. ಖಾನಾಪುರ ತಾಲೂಕು ನಂದಗಡ ಬಳಿ ಮರಕ್ಕೆ ವೇಗವಾಗಿ ಕಾರು ಗುದ್ದಿದೆ. ಸದ್ಯ ಬಾಗಲಕೋಟೆ ಬಿವಿವಿ ಕಾಲೇಜಿನಲ್ಲಿ ಪತ್ರಿಕೊಧ್ಯಮ ಅಧ್ಯಪಕರಾಗಿ ಡಾ. ವಿರೇಶ ಹಿರೇಮಠ ಸೇವೆ ಸಲ್ಲಿಸುತ್ತಿದ್ದರು. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.