SHARE

ಬೆಳಗಾವಿ: ಖಾನಾಪುರ ಮಾಜಿ ಶಾಸಕ ಪ್ರಹ್ಲಾದ ರೆಹಮಾನಿ ಅವರ ನಿಧನಕ್ಕೆ ಗಣ್ಯರಿಂದ ತೀವೃ ಸಂತಾಪ ವ್ಯಕ್ತವಾಗಿದೆ.
ಬೆಳಗಾವಿ ಸಂಸದ ಸುರೇಶ ಅಂಗಡಿ ಸಂತಾಪ ವ್ಯಕ್ತಪಡಿಸಿ ಹಿರಿಯ ರಾಜಕೀಯ ಮುತ್ಸದ್ಧಿ ನಿಧನ ಹೊಂದಿದ ಸುದ್ದಿ ತಮ್ಮ ಮನಸ್ಸಿಗೆ ತುಂಬಾ ದು:ಖವನ್ನುಂಟು ಮಾಡಿದೆ.

ಭಾರತೀಯ ಜನತಾ ಪಾರ್ಟಿಗೆ ರೇಹಮಾನಿ ಅವರು ಸಲ್ಲಿಸಿದ ಸೇವೆ ಅಪಾರವಾಗಿದೆ. ಅವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ಅವರ ಸಾವಿನ ನಷ್ಟವನ್ನು ಸಹಿಸಿಕೊಳ್ಳುವ ಎಲ್ಲ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ ಎಂದು ಸಂಸದರು ಇದೆ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಸಂತಾಪ ಸೂಚಿಸಿದ್ದು ಜಾತ್ಯಾತೀತ ತತ್ವಗಳಿಗೆ ಬದ್ಧರಾಗಿದ್ದ, ಸೌಮ್ಯ ಸ್ವಭಾವದ ಪ್ರಬುದ್ಧ ರಾಜಕಾರಣಿಯಾಗಿದ್ದ ರೇಮಾನಿ ಅವರ ಸಾವು ಇಡೀ ಸಮಾಜಕ್ಕೆ ನಷ್ಟವಾಗಿದೆ ಎಂದು ಸಂತಾಪ ಸಲ್ಲಿಸಿದ್ದಾರೆ.