SHARE

ಬೆಳಗಾವಿ: ಗಣರಾಜ್ಯೋತ್ಸವದ ಶುಭ ಸಂದರ್ಭ ಭಾರತ ಮಾತಾ ಬೈಕ್ ರ್ಯಾಲಿ ನಡೆಸಲಾಗುವುದು ಎಂದು ಆಯೋಜಕ ಹಾಗೂ ಬಿಜೆಪಿ ಮುಖಂಡ ಅನಿಲ ಬೆನಕೆ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಗಾವಿ ನಗರದಲ್ಲಿ ಶಾಂತಿ ಸೌಹಾರ್ಧತೆ ಸ್ಥಾಪಿಸಲು ಭಾರತ ಮಾತೆಯ ಪೂಜೆಯ ಜತೆಗೆ ರ್ಯಾಲಿ ನಡೆಸಲಾಗುವುದು ಎಂದರು.

26th ಜನೇವರಿ ಬೆಳಿಗ್ಗೆ 10 ಕ್ಕೆ ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಬೈಕ್ ರ್ಯಾಲಿ ಪ್ರಾರಂಭವಾಗಲಿದೆ. ಸಂಭಾಜಿ ಉದ್ಯಾನ, ರಾಮಲಿಂಗಖಿಂಡ ಗಲ್ಲಿ, ಸಂಭಾಜಿ ಚೌಕ್, ಕ್ಲಬ್ ರಸ್ತೆ, ಸಂಪಿಗೆ ರಸ್ತೆ, ಲಕ್ಷ್ಮೀ ಕಾಂಪ್ಲೆಕ್ಸ್, ನೆಹರೂ ನಗರ, ರಾಮದೇವ ಹೊಟೇಲ್, ಕೊಲ್ಲಾಪುರ ವೃತ್ತ, ಚನ್ನಮ್ಮ ವೃತ್ತದ ಮೂಲಕ ಸರದಾರ್ಸ್ ಮೈದಾನದಲ್ಲಿ ಮುಗಿಯಲಿದೆ ಎಂದರು. ಸುಮಾರು 800 ಬೈಕಗಳು ಭಾಗವಹಿಸಲಿದ್ದು ನಗರದಲ್ಲಿ ಶಾಂತತೆ ಮತ್ತು ಸೌಹಾರ್ಧತೆಯ ಮೆಸೇಜ್ ಪ್ರದರ್ಶಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಹಾಲಿಂಗ ತಂಗಡಗಿ, ನಿಖಿಲ್ ಮುರಕುಟೆ, ಯಲ್ಲಪ್ಪ ಮೋಹಿತೆ, ಸಂತೋಷ ಸೋಮಾಜಿಚೆ, ನಾಗೇಶ ಲಂಗರಝಾಂಡೆ ಮತ್ತು ಶಂಕರ ಉಪಸ್ಥಿತರಿದ್ದರು.