SHARE

ಬೆಳಗಾವಿ: ಗಣರಾಜ್ಯೋತ್ಸವ ನಿಮಿತ್ತ ನ್ಯಾಯವಾದಿ ಅನಿಲ ಬೆನಕೆ ನೇತೃತ್ವ ದಲ್ಲಿ ಇಂದು ಭಾರತ ಮಾತಾ ಶಾಂತಿ ರ್ಯಾಲಿ ನಗರದ ಮುಖ್ಯ ರಸ್ತೆಗಳಲ್ಲಿ ನಡೆಯಿತು. ನಗರದ ಮಹಾದ್ವಾರ ರಸ್ತೆಯಿಂದ ಬೆಳಿಗ್ಗೆ ೧೦ ಕ್ಕೆ ಹೊರಟ ನೂರಾರು ಬೈಕಗಳು ಶಾಂತಿ, ಸೌಹಾರ್ಧತೆ ಸಾರುತ್ತ, ರಾಷ್ಟ್ರೀಯ ಹೆಮ್ಮೆಯ ಸಂಕೇತ ರಾಷ್ಟ್ರಧ್ವಜ ಝಳಪಿಸುತ್ತ ರ್ಯಾಲಿ ನಡೆಸಿ ನಗರದ ಚನ್ನಮ್ಮ ವೃತ್ತ ತಲುಪಿ ಸರದಾರ್ಸ್ ಮೈದಾನದಲ್ಲಿ ಸಮಾಪ್ತಿಗೊಳಿಸಿದರು.ನಗರದ ವಿವಿಧ ಕ್ಷೇತ್ರದ ಜನತೆ, ಯುವಕ- ಯುವತಿಯರು, ವಿದ್ಯಾರ್ಥಿಗಳು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದರು.ಅನಿಲ ಬೆನಕೆ, ನಿಖಿಲ್ ಮುರಕುಟೆ, ಯಲ್ಲಪ್ಪ ಮೋಹಿತೆ, ಸಂತೋಷ ಸೋಮಾಜಿಚೆ, ನಾಗೇಶ ಲಂಗರಖಂಡೆ ಇತರರು ಭಾಗವಹಿಸಿದರು.