SHARE

ಬೆಳಗಾವಿ/ಕೊಲ್ಲಾಪುರ: ಶಿವಾಜಿ ಸೇತುವೆ ಮೇಲಿಂದ ಮಿನಿ ಬಸ್ ಪಂಚಗಂಗಾ ನದಿಗೆ ಉರುಳಿ ಸುಮಾರು ಹತ್ತು ಜನ ಅಸುನೀಗಿದ ಘಟನೆ ಇಂದು ಬೆಳಿಗ್ಗೆ ಬೆಳಗಾವಿ ಗಡಿಯ, ಕೊಲ್ಲಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿದೆ. ಪುಣೆಯ ಬಾಲೆವಾಡಿಯ ಭರತ ಕೇದಾರಿ ಎಂಬುವರ ಕುಟುಂಬ ದೇವಸ್ಥಾನಕ್ಕೆ ತೆರಳಿ ಮಿನಿ ಬಸನಲ್ಲಿ ಮರಳಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಹುಡುಗಿಯರು ಮತ್ತು ಇಬ್ಬರು ಹುಡುಗರು ತಡರಾತ್ರಿ ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂದೇ ಗಾಡಿಯಲ್ಲಿ ಸುಮಾರು 17 ಜನ ಇದ್ದರು ಎನ್ನಲಾಗಿದೆ.