SHARE

ಬೆಳಗಾವಿ: ಪುತ್ರನೊಬ್ಬ ತನ್ನ ತಂದೆಯನ್ನು ಅಮಾನುಷವಾಗಿ ಹೊಡೆದು ಸಾಯಿಸಿದ ಘಟನೆ ತಡರಾತ್ರಿ ಆಂಜನೇಯ ನಗರದಲ್ಲಿ ನಡೆದಿದೆ. ಮಾಳಮಾರುತಿ ಠಾಣೆ ವ್ಯಾಪ್ತಿಯ ಆಂಜನೇಯ ನಗರ ನಿವಾಸಿ ಉಮಾಕಾಂತ ದಂಡಾವತಿ(೬೦)ಕೊಲೆಗೀಡಾದವರು. ತಡರಾತ್ರಿ ಮಗ ರವಿಂದ್ರ ಮತ್ತು ತಂದೆ ನಡುವೆ ಜಗಳವಾಗಿ ಸಿಟ್ಟಿನ ಭರದಲ್ಲಿ ತಂದೆ ಮೇಲೆ ಪುತ್ರ ಸರಳಿನಿಂದ ದಾಳಿ ಮಾಡಿದ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಮಾಳಮಾರುತಿ ಪೊಲೀಸರು ಪರಿಶೀಲನೆ ನಡೆಸಿದರು.