SHARE

ಬೆಳಗಾವಿ: ನಗರದ ನೆಹರೂ ನಗರ ಮುಖ್ಯರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ KSRTC ಚಾಲಕನಿಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರ ಮೃತಪಟ್ಟಿದ್ದಾರೆ. ಮುರಳಿ ಗೋಪಾಲ ಪಮ್ಮಾರ(32) ಮೃತಪಟ್ಟ ಸರಕಾರಿ ಸಾರಿಗೆ ಸಂಸ್ಥೆಯ ನೌಕರ.ನೆಹರೂ ನಗರ ರಸ್ತೆಯ ಮೇಲೆ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತ್ತಿದ್ದ ಚಾಲಕನ ಮೇಲೆ ಇಳಿ ಸಂಜೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ರಾಮದುರ್ಗ ತಾಲೂಕು ಕಲ್ಮಡ ಗ್ರಾಮದ ಮುರಳಿ ಸಾರಿಗೆ ಸಂಸ್ಥೆಯಲ್ಲಿ ಜೀವನೋಪಾಯ ಕಂಡುಕೊಂಡಿದ್ದರು. ಸ್ಥಳಕ್ಕೆ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು.