SHARE

ಬೆಳಗಾವಿ: ವಿಶ್ವ ಹಿಂದೂ ಪರಿಷತ್ ಹಾಗೂ ಧರ್ಮ ಜಾಗರಣ ವತಿಯಿಂದ ಇಂದು ನಗರದ ಸಮಾದೇವಿ ಗಲ್ಲಿಯಲ್ಲಿ ‘ಸಂತ ಸಮಾವೇಶ’ ಪೂರ್ವಭಾವಿ ಸಭೆ ಮತ್ತು ನೂತನ ಕಾರ್ಯಾಲಯ ಉದ್ಘಾಟನೆ ನಡೆಯಿತು. ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಕಾರ್ಯಾಲಯ ಉದ್ಘಾಟಿಸಿದರು.

ನಂತರ ಮಾತನಾಡಿದ ಕಾರಂಜಿಮಠದ ಸ್ವಾಮೀಜಿ ಅವರು ಹಿಂದೂ ಸಮಾಜ ಸಂಘಟನೆ ಮತ್ತು ಜಾಗೃತಿ ಮಾಡುವ ಸಾಧು ಸಂತರನ್ನು ಫೆ. 25ಕ್ಕೆ ಒಂದೆಡೆ ಸೇರಿಸುವ ಯತ್ನ ಅಭಿನಂದನಾರ್ಹ. ಹಿಂದೂಗಳು ಒಗ್ಗಟ್ಟಾಗಬೇಕು. ತಮ್ಮ ಸಂಸ್ಕ್ರತಿ ಹಿರಿಮೆ ಗರಿಮೆ ಗಳಿಸಿಕೊಳ್ಳಬೇಕು ಎಂಬುವುದು ಸದ್ಯದ ಅವಶ್ಯಕತೆ. ಹಿಂದೂ ಮಹಿಳೆಯರು ಇಂದು ಸಾಕಷ್ಟು ವಿಧ್ಯಾವಂತರಾಗಿದ್ದಾರೆ ಅವರೂ ಸಹ ಸಂಘಟಿತರಾಗಿ ಹಿಂದುತ್ವ ಸಾರುವ ಕೆಲಸ ಮಾಡಬೇಕು ಎಂದು ಸ್ವಾಮೀಜಿ ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳನ್ನು ಹಿಂದುತ್ವದ ಸ್ವಯಂ ವಿಚಾರ ವೇದಿಕೆಗೆ ಕರೆತರುವ ಕೆಲಸ‌ ಆಗಬೇಕು ಎಂದರು.

ವಿಎಚ್ ಪಿ ಪ್ರಾಂತೀಯ ಪ್ರಚಾರಕ ಕೇಶವ ಹೆಗಡೆ ಮಾತನಾಡಿ ಹಿಂದೂ ಸಮಾಜದ ಒಗ್ಗಟ್ಟು ತರಲು ರಾಷ್ಟ್ರಮಟ್ಟದಲ್ಲಿ ಪ್ರಯತ್ನ ನಡೆಸಿದೆ. ಹಿಂದೂ ಸಮಾಜ್ ಜಾಗೃತಿ, ಆಧ್ಯಾತ್ಮ ಶಕ್ತಿಯ ಉಳಿವಿಗಾಗಿ ಪ್ರಯತ್ನ ನಡೆದಿದೆ. ಮಠ-ಮಾನ್ಯ ಮತ್ತು ಧಾರ್ಮಿಕ ಕೇಂದ್ರಗಳನ್ನು ಸುಪರ್ಧಿಗದ ಪಡೆಯಲು ಸರಕಾರ ನಡೆಸಿರುವ ಪ್ರಯತ್ನ ಖಂಡಿಸಲಾಗುತ್ತದೆ ಎಂದು ಘೋಷಿಸಿದರು. ವಿದೇಶಕ್ಕೆ ಹೋಗಿ ಬರುವ ನಮ್ಮ ಜನರಿಂದ ನಮ್ಮ ಮೂಲ ಸಂಸ್ಕೃತ ಹಾಳಾಗುತ್ತಿದೆ. ಕೌಟುಂಬಿಕ ಅಶಾಂತಿ, ರಕ್ತಸಂಬಂಧಗಳಿಗೆ ಬೆಲೆ ಇಲ್ಲದಾಗಿದೆ, ವಿಚ್ಛೇದನ ಪ್ರಕರಣಗಳು ಹೆಚ್ಚಿವೆ, ಧಾರಾವಾಹಿಗಳ ದೃಶ್ಯಗಳಿಂದಲೂ ಸಹ ಇಂದಿನ ನಮ್ಮ ಕೌಟುಂಬಿಕ ವ್ಯವಸ್ಥೆ ಹಾಳಾಗಿದೆ. ರಾಜಕಾರಣಿಗಳು ಇಂದು ಜಾತಿ, ಧರ್ಮ, ಪ್ರಾಂತ ಹೆಸರಿನಲ್ಲಿ ಸಮಾಜ ಒಡೆಯುತ್ತಿದ್ದಾರೆ. ಹಿಂದೂಗಳು ಹಿಂದುತ್ವ ಉಳಿಸಲು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಜಿಲ್ಲೆಯ ಪ್ರತಿ ಹಿಂದೂ ನಾಗರಿಕರ ಮನೆ ಮನೆ ಬಾಗಿಲು ತಟ್ಟಿ ಸಂಸ್ಕಾರ ಪಸರಿಸುವ ಕೆಲಸ ಮುಂದುವರೆಯುತ್ತದೆ. ಪ್ರತಿ ವರ್ಷ 1.50 ಲಕ್ಷ ಲವ್ ಜಿಹಾದ ಕೇಸಗಳು ನಡೆದಿವೆ. ಲಕ್ಷಗಟ್ಟಲೆ ಹಿಂದೂ ಹುಡುಗಿಯರನ್ನು ಲವ್ ಜಿಹಾದನಿಂದ ರಕ್ಷಿಸಲು ಬಜರಂಗದಳ-ವಿಹಿಂಪ ಪ್ರಯತ್ನ ನಡೆಸಿವೆ ಎಂದರು. ಜಿಹಾದಿ ಶಕ್ತಿಗಳ ನಿಯಂತ್ರಣಕ್ಕೆ ಸಾಧು ಸಂತರ ಸಮಾವೇಶ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರೇಮಠ ಸ್ವಾಮೀಜಿ ಮುತ್ನಾಳ, ಗಂಗಾಧರ ಸ್ವಾಮೀಜಿ ಸಿದ್ದನಕೊಳ್ಳಮಠ, ಅಶೋಕ ಸದಲಗೆ, ಪ್ರಮೋದ ಸ್ವಾಮೀಜಿ ಕಿತ್ತೂರು, ರಾಜ ಕಾಳೇ ಮಹಾರಾಜ ಬೆಳಗಾವಿ, ಕೇಶವ ಹೆಗಡೆ ವಿಎಚ್ ಪಿ ಪ್ರಚಾರಕ ಬೆಂಗಳೂರು, ಶ್ರೀಕಾಂತ ಕದಮ ಹಾಗೂ ಬಿಜೆಪಿಯ ನಾಯಕರಾದ ಅನಿಲ ಬೆನಕೆ, ಡಾ. ರವಿ ಪಾಟೀಲ, ಪ್ರಭು ಹೂಗಾರ, ಉಜ್ವಲಾ ಬಡವನಾಚೆ, ಕಿರಣ ಜಾಧವ, ದೀಪಕ ಜಮಖಂಡಿ, ವೀರೇಶ ಕಿವಡಸಣ್ಣವರ ಇತರರು ಉಪಸ್ಥಿತರಿದ್ದರು.