SHARE

ಹೊಸದೆಹಲಿ: ಸಚಿವ ಅನಂತ್‌ಕುಮಾರ್‌ ಹೆಗಡೆ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಸಂಸದ ಪ್ರತಾಪ್‌ ಸಿಂಹ ದೆಹಲಿಯಲ್ಲಿ ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಠ ಮತ್ತು ದೇವಾಲಯಗಳನ್ನು ನಿಯಂತ್ರಿಸಲು ಸುತ್ತೋಲೆ ಹೊರಡಿಸಿ ಮತ್ತೆ ವಾಪಾಸ್‌ ಪಡೆದಿದ್ದಾರೆ. ಈ ಮೂಲಕ ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಹಿಂದೂಗಳು ಮತ್ತು ಹಿಂದು ಧರ್ಮಕ್ಕೆ ಘಾಸಿ ಮಾಡಬೇಡಿ ಎಂದು ಸಚಿವ ಅನಂತ್‌ಕುಮಾರ್‌ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಮಠ ಮತ್ತು ದೇವಾಲಯಗಳನ್ನು ನಿಯಂತ್ರಿಸಲು ಹೊರಟಿರುವ ಸಿದ್ದರಾಮಯ್ಯ ಅವರು ಗುರುಪೀಠಗಳಿಗೆ ಅನ್ಯಾಯ ಮಾಡುತ್ತಿ ದ್ದಾರೆ. ತಾಕತ್‌ ಇದ್ರೆ ಮುಸಲ್ಮಾನರ ಮಸೀದಿ ಮತ್ತು ಚರ್ಚ್ ಗಳನ್ನು ನಿಯಂತ್ರಿಸಲಿ ಎಂದು ಹೇಳಿದರು.

ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ
ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನೊಳಗಿನ ಕಾಮ್ರೆಡ್‌ ಎಂದು ಕಿಡಿ ಕಾರಿದರು.