SHARE

ಬೆಳಗಾವಿ: ನಗರದ ವಡಗಾವಿ ಯುವಕ ಆನಂದ ಕಾಮಕರ ಅವರನ್ನು ನಿಷೇಧಿತ ಪ್ರದೇಶದಲ್ಲಿ ಫೋಟೋ ಕ್ಲಿಕ್ಕಿಸಿದ ಆರೋಪದ ಮೇರೆಗೆ ಬಂಧಿಸಿದ್ದ ಅಬುದಾಬಿ ಪೊಲೀಸರು 4 ದಿನಗಳ ನಂತರ ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಅಲ್ಲಿನ ಭಾರತೀಯ ಧೂತಾವಾಸ ಕಚೇರಿ ಬಳಿ ಫೋಟೊ ಕ್ಲಿಕ್ಕಿಸಿದ್ದ ಆನಂದ ಅವರ ವಿರುದ್ಧ ಅಲ್ಲಿ ಉಪಸ್ಥಿತರಿದ್ದ ಅಮೇರಿಕಾ ಪ್ರಜೆಗಳು ದೂರು ನೀಡಿದ್ದರು ಎನ್ನಲಾಗಿದೆ. ಶುಕ್ರವಾರ & ಶನಿವಾರ ಅಲ್ಲಿ ಸರಕಾರಿ ರಜೆಯಿರುವುದರಿಂದ ನಾಳೆ ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಭಾರತೀಯ ಕರೆನ್ಸಿ ಮೌಲ್ಯದ ₹5 ಸಾವಿರ ದಂಡ ವಿಧಿಸಿ ಯುವಕ ಆನಂದ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಆನಂದ ಪರವಾಗಿ ಕನ್ನಡಿಗ; ಅಲ್ಲಿನ ನ್ಯಾಯವಾದಿ ಮೊಹಮ್ಮದ ಅಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಕಾನೂನು ಸಹಾಯ ಮಾಡಲಿದ್ದಾರೆ ಎಂದು ಮೂಲ ಸ್ಪಷ್ಠಪಡಿಸಿದೆ. ತಮ್ಮ ಮಗನನ್ನು ಸುರಕ್ಷಿತವಾಗಿ ಪೊಲೀಸರು ಬಿಟ್ಟರೆ ಸಾಕು ಎಂದು ಆನಂದ ತಂದೆ ಪಾಂಡುರಂಗ ಕಾಮಕರ ತಿಳಿಸಿದ್ದಾರೆ.