SHARE

ಬೆಳಗಾವಿ: ನಗರದ ಹತ್ತಿರವಿರುವ ಕಾಕತಿ ಗ್ರಾಮದಲ್ಲಿ 20 ಶಾಲಾ ಮಕ್ಕಳ ಕೂದಲು ಕಟ್ಟು ಮಾಡಿದ ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಪ್ರತಿಷ್ಠಿತ ಸೇಂಟ್ ಜಾನ್ ಇಂಗ್ಲಿಷ್ ಮಿಡಿಯಂ ಶಾಲೆಯಲ್ಲಿ ಉದ್ದು ಕೂದಲು ಬಿಟ್ಟಿದ ಸುಮಾರು 20 ಮಕ್ಕಳಲ್ಲಿ ಶಿಸ್ತು ಇಲ್ಲ ಎಂದು ಶಾಲೆಯಲ್ಲಿ ಶಿಕ್ಷರು ಮಕ್ಕಳ ಕೂದಲು ಕಟ್ಟ ಮಾಡಿದ್ದಾರೆ ಎಂದು ಪಾಲಕರು ದೂರಿದ್ದಾರೆ.

ಈ ಬಗ್ಗೆ ಮಕ್ಕಳ ಪಾಲಕರು ವಿಚಾರಿಸಲು ಬಂದಾಗ ಅವರಿಗೆ ಹೆದರಿಸಿದ ಮುಖ್ಯೋಪಾಧ್ಯಾಯರು. ಪುಂಡಾಟಿಕೆ ತೋರಿದ್ದಾರೆ. ಹಾಗು ಮಾದ್ಯಮದವರು ಸುದ್ದಿ ಮಾಡಲು ತೆರಳಿದಾಗ ಮಾದ್ಯಮದವರನೇ ಬೈದು ಕಳಸಿದ ಘಟನೆ ನಡೆದಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಶಾಲಾ ಆಡಳಿತ ಮಂಡಳಿಯ ಜೊತೆ ಮಾತನಾಡಲು ಯತ್ನಿಸಿದಾಗ ಅವರು ಸಹಕರಿಸಿಲ್ಲ. ಒಟ್ಟರೆಯಾಗಿ ಮಕ್ಕಳಲ್ಲಿ ಶಿಸ್ತು ಮೂಡಿಸಲು ಹೋಗಿ ಶಾಲೆಯ ಶಿಕ್ಷಕರು ಪೇಚೆಗೆ ಸಿಲುಕಿದ್ದು ಎಲ್ಲೆಡೆ ಇದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.