SHARE

ಬೆಳಗಾವಿ: ಹಿರಣ್ಯಕೇಶಿ ನದಿ ಪಾತ್ರವನ್ನು ನೀರಾವರಿಗೆ ಒಳಪಡಿಸುವಂತೆ ‘ಹಿರಣ್ಯಕೇಶಿ ನದಿ ನೀರು ಬಳಕೆದಾರರ ಸಂಘ’ ಇಂದು ಒತ್ತಾಯಿಸಿದೆ. ಉತ್ತರ ವಲಯ ನೀರಾವರಿ ಮುಖ್ಯ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ನದಿ ಪಾತ್ರದ ಜನರ ಅಭ್ಯದಯಕ್ಕೆ ಇಡೀ ಪ್ರದೇಶವನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಬೇಕು. ಕೃಷ್ಣಾ ನದಿ ನೀರಿನ ವ್ಯಾಜ್ಯ ಹಾಗೂ 0.5 ಟಿಎಂಸಿ ನೀರಿನ ಒಪ್ಪಂದ ಕರ್ನಾಟಕ- ಮಹಾರಾಷ್ಟ್ರ ನಡೆಸಿವೆ ಎಂದು ಉಲ್ಲೇಖಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಶಂಕರ ಬೋರ್ಸಾಲಿ, ಎ. ಎಸ್. ಹಿರೇಮಠ ಇತರರು ಉಪಸ್ಥಿತರಿದ್ದರು.