SHARE

ಬೆಳಗಾವಿ: ಕಿಲ್ಲಾ ಕೆರೆ ದಂಡೆ ಮೇಲೆ ಹಾರಿಸಲು ಉದ್ದೇಶಿಸಿರುವ ರಾಷ್ಟ್ರದ ಅತ್ಯಂತ ಎತ್ತರದ ಬೃಹತ್ ರಾಷ್ಟ್ರಧ್ವಜದ Trial ಇಂದು ನಡೆಯಿತು.

ಬೆಳಗಾವಿ ನಗರದ ಉತ್ತರ ಶಾಸಕ ಫಿರೋಜ್ ಸೇಠ್, ಬುಡಾ ಹಾಗೂ ಪಾಲಿಕೆ ಆಯುಕ್ತರು, ಅಧಿಕಾರಿಗಳು ಉಪಸ್ಥಿತರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಸ್ತದಿಂದ ಈ ಬೃಹತ್ ರಾಷ್ಟ್ರಧ್ವಜ ಹಾರಿಸುವ ಉದ್ದೇಶ ಹೊಂದಲಾಗಿದ್ದು, ಅವರ ದಿನಾಂಕ ನಿಗದಿಗಾಗಿ ಕಾಯಲಾಗುತ್ತಿದೆ.

ಈಮಧ್ಯೆ ಬೃಹತ್ ರಾಷ್ಟ್ರಧ್ವಜವನ್ನು ಇಂದು ಟ್ರೈಯಲ್ ಗಾಗಿ ಹಾರಿಸಲಾಯಿತು. ಬೆಳಗಾವಿ ನಾಗರಿಕರಿಗೆ ಹೆಮ್ಮೆ ಬರಿಸುವ ರಾಷ್ಟ್ರಪ್ರೇಮ ಮೆರೆಸುವ ಈ ನಡೆ ಸಂತಸ ಮೂಡಿಸಿದೆ.