SHARE

ಬೆಳಗಾವಿ: ಫಿರೋಜ್ ಸೇಠ್ ಅವರ ಶಾಸಕತ್ವ ರದ್ದುಪಡಿಸುವಂತೆ ಬಿಜೆಪಿ ಮುಖಂಡ ಅನಿಲ ಬೆನಕೆ ಇಂದು ಗವರ್ನರ್ ವಜುಭಾಯಿವಾಲಾ ಹಾಗೂ ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಶಾಸಕರಾಗಿದ್ದುಕೊಂಡು ಲಾಭದಾಯಕ ಹುದ್ದೆ ಬುಡಾ ಚೇರಮನ ಆಗಿ ನೇಮಕವಾದ ಬಗ್ಗೆ ಅನಿಲ ಬೆನಕೆ ಆಕ್ಷೇಪ ವ್ಯಕ್ತಪಡಿಸಿ ಲಿಖಿತ ದೂರು ಇಂದು ಸಂಜೆ ರವಾಣಿಸಿದರು.ಕರ್ನಾಟಕ ಸರಕಾರ BUDA ಚೇರಮನ್ ಆಗಿ ಶಾಸಕ ಫಿರೋಜ್ ಸೇಠ್ ಅವರನ್ನು ನೇಮಿಸಲು ಕಾನೂನು ಅವಕಾಶವಿಲ್ಲ. ಸರಕಾರದ ನೀತಿ ನಿಯಮವಾಳಿಗಳ ದುರುಪಯೋಗ ಸ್ಪಷ್ಟವಾಗಿದೆ. ಕಳೆದ ಒಂದೂವರೆ ವರ್ಷದಿಂದ ಬುಡಾ ಅಧ್ಯಕ್ಷ ಹುದ್ದೆ ಖಾಲಿ ಇತ್ತು. ಅಕ್ರಮ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಫಿರೋಜ್ ಸೇಠ್ ಬುಡಾ ಅಧ್ಯಕ್ಷ ಹುದ್ದೆ ತರಾತುರಿಯಲ್ಲಿ ವಹಿಸಿಕೊಂಡದ್ದಾರೆ ಎಂದು ಬೆನಕೆ ಆರೋಪಿಸಿದ್ದಾರೆ.

ಸಂವಿಧಾನದ 102 ಮತ್ತು 191ರ ಲಾಭದಾಯಕ ಹುದ್ದೆ ಪರಿವ್ಯಾಪ್ತಿಗೆ ಇದು ಬರುತ್ತದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕರ್ನಾಟಕ ಸರಕಾರ ನಡೆದುಕೊಂಡಿದೆ. ಕೂಡಲೇ ಫಿರೋಜ್ ಸೇಠ್ ಶಾಸಕತ್ವ ರದ್ಧಾಗಬೇಕು ಎಂದು ಬೆನಕೆ ಆಗ್ರಹಿಸಿದ್ದಾರೆ. ರಾಜ್ಯ ಚುನಾವಣೆ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ದೂರು ಪ್ರತಿ ರವಾಣಿಸಲಾಗಿದೆ.