SHARE

ಬೆಳಗಾವಿ: ಇಲ್ಲಿನ ಅಟೋನಗರದ ಮಟನ್ ಪಾರ್ಸಲ್ ಕೇಂದ್ರ‌ವೊಂದು ಅನಧಿಕೃತವಾಗಿದೆ ಎಂದು ಆರೋಪಿಸಿ ಅದನ್ನು ಬಂದ್ ಮಾಡುವಂತೆ ಇಂದು ಆಗ್ರಹ ವ್ಯಕ್ತವಾಗಿದೆ. ಮಟನ್ ಶಾಪ್ ನಡೆಸುವವರ ಹತ್ತಿರ ದಾಖಲೆಗಳಿಲ್ಲ ಇದನ್ನು ಬಂದ್ ಮಾಡಬೇಕು ಎಂದು ‘ಮೇನಕಾ ಗಾಂಧಿ’ ಆಧೀನದ NGO ನಿನ್ನೆಯಿಂದಲೇ ಹೋರಾಟ ಆರಂಭ ಮಾಡಿದೆ.ನೂರಾರು ಯುವಕರು ಸೇರಿ NGO ಹೋರಾಟಕ್ಕೆ ಅಡ್ಡಿ ಪಡಿಸಿದ್ದರು ಎಂದು ತಿಳಿದು ಬಂದಿದೆ. ಇವತ್ತು ಮಾಳಮಾರುತಿ ಪೋಲೀಸರು ಪಂಚನಾಮೆ ಮಾಡಿ ತನಿಖೆ ನಡೆಸಿದ್ದಾರೆ. ಸ್ಥಳೀಯ ಶಾಸಕನೊಬ್ಬನ ಅನುಯಾಯಿಗಳು ಎನ್ ಜಿಓ ಹೋರಾಟಕ್ಕೆ ಅಡ್ಡಿ ಪಡಿಸಿ ಸಾಮಾಜಿಕ ಹೋರಾಟದ ಹಿನ್ನಲೆಯುಳ್ಳ ಆ NGOಗೆ ಗುಂಡಾಗಿರಿ ಮಾಡಲು ಪ್ರಯತ್ನಿಸಿದರು ಎನ್ನಲಾಗಿದೆ. ಅಟೋನಗರದ ಮಟನ್ ಫ್ಯಾಕ್ಟರಿಯ ಹಾವಳಿ ಹೆಚ್ಚಾಗಿದೆ. ತರಕಾರಿ ಸ್ಟೋರೇಜ್ ಮಾಡ್ತೀವಿ ಅಂತ ಬೀಫ್ ಸ್ಟೋರೇಜ್ ಮಾಡ್ತಾರೆ ಎಂಬ ಆರೋಪ ವ್ಯಕ್ತವಾಗಿದೆ. ಸ್ಥಳಿಯರು ವಿರೋಧ ಮಾಡಿದ್ದಾರೆ ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ರಾಜಕಾರಣಿಗಳ ಮರ್ಜಿಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.ಎನ್ ಜಿಓಗೆ ಸ್ಥಳೀಯರು ನೀಡಿದ ದೂರು ಅನ್ವಯ ಆಟೋನಗರದಲ್ಲಿನ ಕಸಾಯಿ ಖಾನೆಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿಯಿಂದ ಆಗಮಿಸಿದ ಎನ್ ಜಿಓ ಮಹಿಳಾ ಸಿಬ್ಬಂದಿಗಳು ಕಣ್ಣೀರಿಟ್ಟ ಪ್ರಸಂಗ ಮಂಗಳವಾರ ನಡೆಯಿತು. ಮುಂಜಾನೆಯಿಂದಲೇ ಕಸಾಯಿ ಖಾನೆ ಒಳಗಡೆ ಪ್ರವೇಶಿಸಲು ಮಹಿಳಾ ಸಿಬ್ಬಂದಿಗಳು ಪರದಾಡುತ್ತಿದ್ದರು. ಕಸಾಯಿ ಖಾನೆ ಮಾಲೀಕರ ಪರ ವಕೀಲ ಹಾಗೂ ಕೆಲ ಖಾಸಗಿ ವ್ಯಕ್ತಿಗಳನ್ನು ಪೊಲೀಸರು ಪರಿಶೀಲನೆ ಸಂದರ್ಭದಲ್ಲಿ ಒಳಗಡೆ ಅವಕಾಶ ನೀಡಿ ಅದೇ ಸಂದರ್ಭ ದೂರು ನೀಡಿದವರಿಗೆ ಪ್ರವೇಶ ನಿರಾಕರಿಸಿದಕ್ಕೆ ಎನ್ ಜಿಓ ಸಿಬ್ಬಂದಿಗಳು ಆಕ್ರೋಶ ವ್ಯಕ್ತ ಪಡಿಸಿದರು.ಪೊಲೀಸ್ ಅಧಿಕಾರಿಗಳು ಕಸಾಯಿ ಖಾನೆ ಒಳಗಡೆ ಪ್ರವೇಶಿಸಲು ಸಹ ಹಿಂದೇಟು ಹಾಕುತ್ತಿದ್ದರು ಎನ್ನಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಪರದಾಡಿದರು. ಸ್ಥಳಕ್ಕೆ ಬಿಜೆಪಿ ಮುಖಂಡರಾದ ಅನಿಲ ಬೆನಕೆ, ರಾಜೇಂದ್ರ ಹರಕುಣಿ ಆಗಮಿಸಿ ಮಾಳಮಾರುತಿ ಪೊಲೀಸ್ ಅಧಿಕಾರಿ ಚನ್ನಕೇಶವ & ಸಿಬ್ಬಂದಿಗಳ ಜೊತೆಗೆ ವಾಗ್ವಾದ ನಡೆಸಿದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಕಸಾಯಿ ಖಾನೆ ಒಳಗಡೆ ತೆರಳಲು ಇಬ್ಬರಿಗೆ ಅವಕಾಶ ನೀಡಿದರು.