SHARE

ಬೆಳಗಾವಿ: ಮೀಸೆ ಮಾವನೆಂದೇ ಪ್ರೀತಿಯಿಂದ ಕರೆಸಿಕೊಳ್ಳುವ, ಕ್ರಿಯಾಶೀಲ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಚಿಕ್ಕೋಡಿ ಜಿಲ್ಲಾ ರಚನೆಗೆ ಜಿದ್ದಿಗೆ ಬಿದ್ದಂತಿದೆ. ಚಿಕ್ಕೋಡಿ ಜಿಲ್ಲೆ ಮಾಡುವ ಹೋರಾಟದ ಅಂಗವಾಗಿ ಜಿಲ್ಲಾ‌ ಹೋರಾಟ ಸಮಿತಿಯ‌ ನಿಯೋಗ ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಸಂಸದ‌ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಮಠಾಧಿಶರೊಂದಿಗೆ ಇಂದು ಮುಖ್ಯಮಂತ್ರಿ ಭೇಟ್ಟಿಗೆ ಬೆಂಗಳೂರಿಗೆ ತೆರಳಿತು.ಶ್ರೀ ಮ ನಿ ಪ್ರ ಜ ಶಿವಲಿಂಗೆಶ್ವರ ಮಹಾಸ್ವಾಮಿಗಳು ದುರದುಂಡಿಶ್ವರ ಸಿದ್ಧ ಸಂಸ್ಥಾನ ಮಠ ನಿಡಸೋಸಿ. ಶ್ರೀ ಮ ನಿ ಪ್ರ ಸಂಪಾದನ ಮಹಾಸ್ವಾಮಿಗಳು ಚರ್ಮೂತೇಶ್ವರ ಮಠ ಚಿಕ್ಕೋಡಿ. ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾ ಸ್ವಾಮಿಗಳು ಗೌರಿ ಶಂಕರ ಮಠ ಕಬ್ಬುರ. ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಬೆಂಡವಾಡ ಶ್ರೀದ್ವಯರು ಸಹ ಚಿಕ್ಕೋಡಿ ಜಿಲ್ಲಾ ಹೋರಾಟದ ಧ್ವನಿಯಾಗಿ ವಿಮಾನದ ಮೂಲಕ ಬೆಂಗಳೂರತ್ತ ತೆರಳಿದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಗೃಹ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಲಿದ್ದು ಹಕ್ಕೊತ್ತಾಯ ಮಾಡಲಿದ್ದಾರೆ. ಈಗಾಗಲೇ 30 ಕ್ಕೂ ಹೆಚ್ಚು ಚಿಕ್ಕೋಡಿ ಭಾಗದ ಪ್ರಮುಖರು ಬಸ್ ಮೂಲಕ ತಡರಾತ್ರಿ ಬೆಂಗಳೂರಿಗೆ ತೆರಳಿದ್ದು ನಿಯೋಗವಾಗಿ ಸಿಎಂ ಭೇಟಿ ನಡೆಯಲಿದೆ.