SHARE

ಬೆಂಗಳೂರು: ಕೊನೆಗೂ ರಾಜ್ಯದ ಪ್ರತ್ಯೇಕ ನಾಡಧ್ವಜ ಅನಾವರಣ ಗೊಂಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧ್ವಜವನ್ನು ಅನಾವರಣ ಮಾಡಿದ್ದಾರೆ.ಕೆಂಪು, ಹಳದಿಯೊಂದಿಗೆ ಬಿಳಿ ಬಣ್ಣ ಇರುವ ನಾಡಧ್ವಜವನ್ನು ಸರಕಾರ ಅಂಗೀಕರಿಸಿದ್ದು, ನಾಡಧ್ವಜ ಸಮಿತಿ ಜೊತೆ ಸಮಗ್ರ ಚರ್ಚೆ ನಡೆಸಿ ತೀರ್ಮಾನಕ್ಕೆ ಬಂದಿದೆ. ನಾಡಧ್ವಜ ವಿನ್ಯಾಸದಲ್ಲಿ ಹಳದಿ ಮತ್ತು ಕೆಂಪು ಎರಡು ಬಣ್ಣಗಳ ಜೊತೆ ಬಿಳಿ ಬಣ್ಣವನ್ನೂ ಬಳಸಿಕೊಳ್ಳಲು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ನಿಟ್ಟಿನಲ್ಲಿ ಇಂದು ಕನ್ನಡಪರ ಸಂಘಟನೆಗಳ ಜತೆ ಚರ್ಚಿಸಿ ನಾಡಧ್ವಜ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಳದಿ, ಬಿಳಿ, ಕೆಂಪು ಬಣ್ಣದ ನಡುವೆ ರಾಜ್ಯ ಸರ್ಕಾರದ ಮುದ್ರೆ ನಾಡಧ್ವಜದಲ್ಲಿದ್ದು, ಕೇಂದ್ರ ಸರಕಾರವೇ ಈ ಧ್ವಜವನ್ನು ನಾಡಧ್ವಜವೆಂದು ಘೋಷಿಸಲಿದೆ ಎಂದು ಹೇಳಿದರು.