SHARE

ಬೆಳಗಾವಿ: ತಮ್ಮದು ಶುದ್ಧ ಮತ್ತು ಆರೋಗ್ಯ ಸ್ನೇಹಿ ಗೋಧಿ ಹಿಟ್ಟು, ಹೆಸರಾಂತ ಗೋಧಿ ಹಿಟ್ಟು ಕಂಪನಿಗಳಿಗಿಂತ ಚೆನ್ನಾಗಿದೆ ಎಂದು ನಗರದ ಡೈಮಂಡ್ ಚಕ್ಕಿ ಆಟ್ಟಾ ಕಂಪನಿ ವ್ಯವಸ್ಥಾಪಕ ಜಿ. ನರೇಂದ್ರ ಹೇಳಿಕೆ ನೀಡಿದ್ದಾರೆ. ಕಲಬೆರಕೆ ಗೋಧಿ ಹಿಟ್ಟು ಎಂದು ಗ್ರಾಹಕರು ಆರೋಪಿಸಿ ವಿಡಿಯೋ ವೈರಲ್ ಆಗಿ; ಮಾಧ್ಯಮಗಳ ಕೈಗೆ ಸಿಕ್ಕ ಕಲಬೆರಕೆ ಆರೋಪದ ಹಿಟ್ಟಿನ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಕಂಪನಿ ವ್ಯವಸ್ಥಾಪಕ ತಮ್ಮ ಹೇಳಿಕೆ thebelgaumnews.comಗೆ ನೀಡಿದ್ದಾರೆ.

ನಮ್ಮ ಗೋಧಿ ಹಿಟ್ಟು ಕಲಬೆರಕೆ ಆಗಿಲ್ಲ. ಗ್ರಾಹಕರಿಗೆ ಮೋಸ ಮಾಡುವ ಉದ್ದೇಶ ನಮಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತಪ್ಪು ಕಲ್ಪನೆಯದು ಹೊರತು ಅದರಲ್ಲಿ ನಿಜಾಂಶವಿಲ್ಲ. ಗೋಧಿ ಕಾಳು ಫೈಬರ್, ಸ್ಟಾರ್ಚ್ ಮತ್ತು ಗ್ಲೂಟನ್ ಅಂಶ ಸಹಜವಾಗಿ ಹೊಂದಿರುತ್ತದೆ. ಗ್ಲೂಟನ್ ಅಂಶ ಎಲಾಸ್ಟಿಕ್ ಸ್ವರೂಪದ್ದು ಇರುವುದರಿಂದ ಗ್ರಾಹಕರಲ್ಲಿ ಪ್ಲಾಸ್ಟಿಕ್ ಅಂಶ ಇದೆ ಎಂದು ಆತಂಕವಾಗಿರಬಹುದು, ಆದರೆ ಆರೋಗ್ಯ ಸ್ನೇಹಿ, ಸೇವಿಸಲು ಉತ್ತಮವಾದ ಡೈಮಂಡ್ ಅಟ್ಟಾ ಬಗ್ಗೆ ಆತಂಕ ಬೇಡ, ಬೇಕಾದ್ರೆ ಗ್ರಾಹಕರಿಗೆ ಅದರ ಬಗ್ಗೆ ಪ್ರಾತಕ್ಷಿಕೆ ನೀಡುವುದಾಗಿ ಕಂಪನಿ ಎಂಡಿ ತಿಳಿಸಿದ್ದಾರೆ. ಗ್ರಾಹಕರ ಆರೋಪದ ವಿಡಿಯೋ ವೈರಲ್ ಬೆನ್ನಿಗೆ ಕಂಪನಿ ಹೇಳಿಕೆ ಹೊರಬಿದ್ದಿದೆ.