SHARE

ಬೆಳಗಾವಿ: ರೈತರ ಬೆಳೆಗಳಿಗೆ ಅದರಲ್ಲೂ ತರಕಾರಿ ಬೆಳೆಗಳಿಗೆ ಸರಕಾರ ಬೆಂಬಲ ಬೆಲೆ ಕೊಡಬೇಕು ಎಂದು ಆಗ್ರಹಿಸಿ ರೈತರು ಡಿಸಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸಿದರು.ಕ್ಯಾಬೇಜ್, ಫ್ಲಾವರ್, ಗಜ್ಜರಿ, ಟೊಮೆಟೊ ಸೇರಿದಂತೆ ಇತರ ತರಕಾರಿಗಳ ಬೆಲೆ ಮಾರುಕಟ್ಟೆಯಲ್ಲಿ ಗಣನೀಯವಾಗಿ ಕುಸಿದಿದೆ. ಇದರಿಂದ ರೈತರ ಬಾಳು ಕಂಗಾಲಾಗಿದ್ದು ಸರಕಾರ ಸೂಕ್ತ ಪರಿಹಾರೋಪಾಯ ತಿಳಿಸಬೇಕೆಂದು ಡಿಸಿ ಕಚೇರಿ ಗೇಟ್ ಕ್ಯಾಬೇಜ್ ಚೀಲಗಳನ್ನು ಇಟ್ಟು ಬಂದ್ ಮಾಡಿದರು.ಕಡೋಲಿ, ಕಾಕತಿ, ದೇವಗಿರಿ, ಹೊನಗಾ ಇತರ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು. ಅಪ್ಪಾಸಾಬ ದೇಸಾಯಿ, ಸುಭಾಯ ದಾಯಗೊಂಡೆ, ರಾಜು ಕಾಗಣೀಕರ, ನಾಮದೇವ ದುಡುಂ, ರಾಮಚಂದ್ರ ಫಡಕೆ ಇತರರು ಉಪಸ್ಥಿತರಿದ್ದರು.