SHARE

ಬೆಳಗಾವಿ: ಆಧಾರ ಕಾರ್ಡ್ ಕೇಂದ್ರಗಳನ್ನು ಹೆಚ್ಚು ತೆರೆಯುವಂತೆ ಒತ್ತಾಯಿಸಿ ನ್ಯಾಯವಾದಿಗಳು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಕೀಲರಾದ ಅಣ್ಣಾಸಾಹೇಬ ಘೋರ್ಪಡೆ, ರವಿ ಬೋಗಾರ್, ಬಿ. ಎಸ್‌. ಹಿರೇಮಠ, ಡಿ. ಪಿ. ಜೇವಣಿ, ಉದಯ ತಳವಾರ, ಮೋಹನ ನಂದಿ, ಸುಭಾಷ ಮೊದಗೇಕರ, ಶರತ ದೇಸಾಯಿ, ಆರ್. ಎನ್. ನಲವಡೆ, ಪಿ. ಜಿ. ಹಿರೇಮಠ ಮತ್ತಿತರರು ಧರಣಿ ನಡೆಸಿದರು. ಆಧಾರ ಕಾರ್ಡ್ ಕೇಂದ್ರಗಳು ಜನರ ಬೇಡಿಕೆಗೆ ತಕ್ಕಷ್ಟು ಇಲ್ಲ. ಹೊಸ ಕಾರ್ಡ್, ಕಾರ್ಡ್ ವಿಳಾಸ ಬದಲಾವಣೆ ಮತ್ತಿತರ ಕೆಲಸಗಳಿಗೆ ಜನತೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಹೆಚ್ಚುವರಿ ಆಧಾರ ಕಾರ್ಡ್ ಕೇಂದ್ರ ತೆರೆಯಲು ಆಗ್ರಹಿಸಿದರು.