SHARE

ಬೆಳಗಾವಿ: ಪೂನಾದ ಇಂಡಿಯನ್ ವರ್ಚ್ಯುಲ್ ಅಕಾಡೆಮಿ ಕೊಡಮಾಡುವ ಗೌರವ ಡಾಕ್ಟರೇಟ್‌ ಅನ್ನು ಮಹಾನಗರ ಪಾಲಿಕೆ ಅಧಿಕಾರಿ ಗಜಾನನ ಕಾಂಬಳೆ ಸ್ವೀಕರಿಸಿದರು. ಶಾಂತಿ, ಸೌಹಾರ್ಧತೆ ಮತ್ತು ಉತ್ತಮ ಸರಕಾರಿ ಸೇವೆಗೈದವರಿಗೆ Virtual Academy ತನ್ನ ಗೌರವ ಡಾಕ್ಟರೇಟ್‌ ನೀಡಿ ಗೌರವಿಸುತ್ತದೆ. ಪೂನಾದಲ್ಲಿ ವಿವಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗಜಾನನ ಅವರನ್ನು ಸನ್ಮಾನಿಸಲಾಯಿತು.