SHARE

ಬೆಳಗಾವಿ: ಭ್ರಷ್ಟ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ತೀವ್ರ ಗೊಳಿಸಿರುವ ಎಸಿಬಿ ಎಸ್ಪಿ ಅಮರನಾಥರೆಡ್ಡಿ ಇಂದು ಬೆಳ್ಳಂಬೆಳಗ್ಗೆ ಬೆಳಗಾವಿ ಮಹಾನಗರ ಪಾಲಿಕಯ AEE ಮನೆ ಮೇಲೆ ದಾಳಿ ನಡೆದು ಶೋಧ ಮುಂದುವರೆದಿದೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ಇಂದು ವಿವಿಧೆಡೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿಪಾಸ್ತು ಹೊಂದಿರುವವರ ಬಗ್ಗೆ ಮಾಹಿತಿ ಸಿಕ್ಕ ಮೇರೆಗೆ ಬೆಳಗಾವಿ ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ಶೋಧ ಕಾರ್ಯ ಇಂದು ನಡೆದಿದೆ. ಮಹಾನಗರ ಪಾಲಿಕೆ ಎಇಇ ಕಿರಣ್ ಸುಬ್ಬರಾವ್​ ಭಟ್​ ಮನೆ ಮತ್ತು ಕಚೇರಿ ಸೇರಿದಂತೆ 6 ಕಡೆಗೆ ದಾಳಿ ನಡೆಸಿದ್ದಾರೆ. ಧಾರವಾಡ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಲೆನ್ಸ್​ ಅಧಿಕಾರಿ ಶ್ರೀಪತಿ ದೊಡ್ಡಲಿಂಗನ್ನವರ ಕಚೇರಿ, ಮನೆ ಸೇರಿದಂತೆ 4 ಕಡೆಗೆ ಏಕಕಾಲಕ್ಕೆ ಎಸಿಬಿ ಇಂದು ಅಧಿಕಾರಿಗಳು ದಾಳಿಯನ್ನು ಮಾಡಿದ್ದಾರೆ.