SHARE

ಖಾನಾಪುರ: ಪಟ್ಟಣದ ಮಲಪ್ರಭಾ ಕ್ರೀಡಾಂಗಣದಲ್ಲಿ ಮಾ.30 ರಂದು ಉದ್ಯೋಗ ಮೇಳ ಅಯೋಜಿಸಲಾಗಿದೆ. ತಾಲೂಕಿನ ನಿರುದ್ಯೋಗ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಡಿಎಸ್ ಧುರೀಣ ನಾಸೀರ ಬಾಗವಾನ್ ಭಾನುವಾರ ಲೋಕೋಪಯೋಗಿ ಇಲಾಖೆ ವಿಶ್ರಾಂತಿ ಗೃಹದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.

ಕ್ಷೇತ್ರದಲ್ಲಿ ಶಿಕ್ಷಣ ಕೊರತೆ ಇದ್ದು ಉದ್ಯೋಗವಿಲ್ಲದೆ ಹೊರ ರಾಜ್ಯಗಳಿಗೆ ಉದ್ಯೋಗ ಅರಸಿ ಹೊರ ಹೋಗುವ ಸ್ಥಿತಿ ತಲುಪಿದೆ. ಭಾಷೆ ಬೇದ ಭಾವ ಮಾಡದೆ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಂಕಲ್ಪ ನಮ್ಮದಾಗಿದೆ. ಕಾಂಗ್ರೆಸ್ ಪಕ್ಷ ನನಗೆ ಟಿಕೇಟ್ ನೀಡುವ ಭರವಸೆ ನೀಡಿ ವಂಚಿಸಿದೆ. ಹೊರ ರಾಜ್ಯದಿಂದ ಬಂದವರಿಗೆ ಮಣೆ ಹಾಕುವದರ ಮೂಲಕ ನಾಡದ್ರೋಹ ಕೆಲಸಕ್ಕೆ ಮುಂದಾಗಿದೆ ಎಂದು ಟೀಕಿಸಿದರು. ಮುಸ್ಲಿಂ ಸಮುದಾಯ್‍ಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದ್ದಾರೆ. ಈ ಬಾರಿ ಮುಸ್ಲಿಂ ರು ಜೆಡಿಎಸ್ ಪರವಾಗಿ ನಿಲ್ಲಲಿದ್ದಾರೆ ಎಂದರು.

ಕ್ಷೇತ್ರದಲ್ಲಿ ಅಧಿಕಾರ ದುರುಪಯೋಗ ಮತ್ತು ಹಣ ಹೆಂಡದ ಹೊಳೆ ಮೂಲಕ ನಿಸ್ಪಕ್ಷಪಾತವಾಗಿ ಚುನಾವಣೆ ನಡೆಯುವದು ಅನುಮಾನವಿದೆ. ಖಾನಾಪುರ ಕ್ಷೇತ್ರವನ್ನು ಸೂಕ್ಷ್ಮ ಎಂದು ಪರಿಗಣಿಸಲು ಚುನಾವಣೆ ಅಯೋಗಕ್ಕೆ ಒತ್ತಾಯಿಸಲಾಗುತ್ತದೆ. ತಾಲೂಕಿನಲ್ಲಿ ಹಲವು ನದಿಗಳ ಸಂಗಮವಿದ್ದು ಸರಿಯಾಗಿ ಬಳಿಕೆಯಾಗಿಲ್ಲ. ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವದು ತಮ್ಮ ಕನಸಾಗಿದೆ ಎಂದರು. ಮಹದಾಯಿ ಗೋವಾ ವಿರೋಧಿಸುವದರಲ್ಲಿ ಯಾವ ಅರ್ಥವು ಇಲ್ಲ ಎಂದರು.

ಜೆಡಿಎಸ್ ಧುರೀಣ ರೇವಣಸಿದ್ದಯ್ಯಾ ಹಿರೇಮಠ ಮಾತನಾಡಿ ಪ್ರಮುಖ ಕಂಪನಿಗಳು ಭಾಗಿಯಾಗುವದರ ಮೂಲಕ ಉದ್ಯೋಗ ಅವಕಾಶ ನಿರುದ್ಯೋಗಿಗಳಿಗೆ ದೋರಕುವಂತೆ ಮಾಡಲಾಗಿದೆ. ಬಾಗವಾನ ಅಭಿಮಾನಿಗಳು ಈ ಮೇಳ ಹಮ್ಮಿ ಕೊಂಡಿದ್ದಾರೆ ಎಂದರು. ಈ ಸಂಧರ್ಬದಲ್ಲಿ ಲಿಯಾಕತ ಅಲಿ ಬಿಚ್ಚುಣ್ಣವರ, ನಾಗರಾಜ ಹುಬ್ಬಳ್ಳಿ ಉಪಸ್ಥಿತರಿದ್ದರು.