SHARE

ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಕಮಿಷ್ನರ್ ಆಗಿ ಕೆಲವೇ ತಿಂಗಳ ಹಿಂದೆ ಆಗಮಿಸಿದ್ದ ಡಾ. ಡಿ. ಸಿ. ರಾಜಪ್ಪ ಅವರಿಗೆ ಸರಕಾರ ಗೇಟ್ ಪಾಸ್ ನೀಡಿದೆ. ಡಾ. ರಾಜಪ್ಪ ಇನ್ನು ಬೆಂಗಳೂರು ರೈಲ್ವೆ ಡಿಐಜಿಯಾಗಿ ಹೊರಟಿದ್ದಾರೆ. ಬೆಳಗಾವಿ ಪೊಲೀಸ್ ಕಮಿಷ್ನರ್ ಆಗಿ ಐಪಿಎಸ್ ಅಧಿಕಾರಿ ಮಂಜುನಾಥ ಅಣ್ಣಿಗೇರಿ ಆಗಮಿಸಲಿದ್ದಾರೆ. ಕೆಲವೇ ತಿಂಗಳು ಬೆಳಗಾವಿ ಪೊಲೀಸ್ ಕಮಿಷ್ನರ್ ಆಗಿದ್ದ ಡಾ. ರಾಜಪ್ಪ ಹಾಸ್ಯಗೋಷ್ಠಿ, ಕವಿಗೋಷ್ಠಿ ಏರ್ಪಡಿಸಿ ನಗರ ನಾಗರಿಕರ ಗಮನ ಸೆಳೆದಿದ್ದರು. ಮಂಜುನಾಥ ಅಣ್ಣಿಗೇರಿ ಮೇಲೆ ವ್ಯವಸ್ಥಿತ ಚುನಾವಣೆ ನಡೆಸುವ ಜವಾಬ್ದಾರಿ ಬಿದ್ದಿದೆ.

CEO ಗಮನಕ್ಕೆ CS ಪತ್ರ:ಒಟ್ಟು ಐವರು ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿರುವ ಸರಕಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರ ಆದ್ಯ ಅನುಮತಿ ಮತ್ತು ಗಮನಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಪತ್ರ ರವಾಣಿಸಿದ್ದಾರೆ.