SHARE

ಬೆಳಗಾವಿ: ಜೆಡಿಎಸ್ ಪಕ್ಷ ಅಳವಡಿಸಿದ್ದ ಪ್ರಚಾರ ಬ್ಯಾನರ್​ಗೆ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ವಿಘ್ನ ಸಂತೋಷಿ ಘಟನೆ ತಾಲೂಕಿನ ಸುಳೇಭಾವಿ ಹಾಗೂ ಮಾರೀಹಾಳ ಗ್ರಾಮಗಳಲ್ಲಿ ನಡೆದಿದೆ. ಜೆಡಿಎಸ್​ನ ಗ್ರಾಮೀಣ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಶಿವನಗೌಡ ಪಾಟೀಲ್​ ಹಾಗೂ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಉದಯ ಕೆಸರೂರ ಇಬ್ಬರ ಚಿತ್ರ ಇದ್ದ ಬ್ಯಾನರ್​ನಲ್ಲಿ ಕಿಡಿಗೇಡಿಗಳು ಫೋಟೋವನ್ನು ಲೈಟರ್‌ನಿಂದ ಸುಟ್ಟು ಬ್ಯಾನರ್​ ವಿರೂಪಗೊಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು, ಕಿಡಿಗೇಡಿಗಳನ್ನು ಬಂಧಿಸುವಂತೆ ಮಾರೀಹಾಳ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್​ಗೆ ಮನವಿ ಮೂಲಕ ದೂರು ಸಲ್ಲಿಸಿದರು. ಇನ್ಸ್​ಪೆಕ್ಟರ್ ವಿಜಯಕುಮಾರ ಶಿನ್ನೂರ ತಪ್ಪಿತಸ್ಥರನ್ನು ಬಂಧಿಸುವುದಾಗಿ ಭರವಸೆ ನೀಡಿದರು.